Header Ads
Breaking News

ವಿಶ್ವ ಹಿಂದು ಪರಿಷತ್ ಬಜರಂಗದಳ ಭಗತ್ ಶಾಖೆ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ : ಪರಿಸರದ ಜನತೆಗೆ ಆಹಾರ ಸಾಮಾಗ್ರಿ ವಿತರಣೆ

ವಿಶ್ವ ಹಿಂದು ಪರಿಷತ್ ಬಜರಂಗದಳ ಭಗತ್ ಶಾಖೆ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಇವರ ವತಿಯಿಂದ ಇಂದು ಕೊಟ್ಟಾರ ಪರಿಸರದ ಈ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ 60 ಮನೆಗಳಿಗೆ ಆಹಾರ ಸಾಮಗ್ರಿ ಮತ್ತು ದಿನನಿತ್ಯ ಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳ ಕಿಟ್ಟನ್ನು ವಿತರಿಸಲಾಯಿತು.  ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವಾಕ್ಯದಂತೆ ನಮ್ಮ ಸಂಘಟನೆಯ ಕಾರ್ಯಕರ್ತರು ಸ್ವತಃ ತಮ್ಮ ಮನೆಗಳಲ್ಲಿ ಕಷ್ಟ ಇದ್ದರೂ ಕೂಡ ತಮ್ಮಿಂದ ಆಗುವಷ್ಟು ಹಣವನ್ನು ನೀಡಿ ಈ ಸೇವಾ ಕಾರ್ಯದಲ್ಲಿ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಸುನಿಲ್ ಪಾಲ್ದಡಿ ಹೇಳಿದರು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕೊಟ್ಟರು ಇದರ ಅಧ್ಯಕ್ಷರಾದಂತಹ ಲೋಕೇಶ್ ಶೆಟ್ಟಿ ಗುರಿ ಕಂಡ , ಹಿರಿಯರಾದ ರಾಜು ಕುಲಾಲ್ , ಮತ್ತು ಬಜರಂಗದಳದ ಸಂಚಾಲಕ ರಾದ ಅವಿನಾಶ್ ಶೆಟ್ಟಿ, ಸಹ ಸಂಚಾಲಕರಾದ ರಾಕೇಶ್ ರೈ ಪಾಲ್ದಡಿ , ಗೋರಕ್ಷ ಪ್ರಮುಖರಾದ ವಿನೋದ್ ಕೋಟ್ಯಾನ್ ಮಣ್ಣಗುಡ್ಡ ಪ್ರಖಂಡದ ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿಯಾದ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *