Header Ads
Breaking News

ಕೊರಗಜ್ಜನ ಕಾಣಿಕೆ ಡಬ್ಬ ಅಪವಿತ್ರಗೈದ ಪ್ರಕರಣ : ಕ್ಷಮಾಪಣೆಗೆ ಬಂದ ಆರೋಪಿಗಳು

ತುಳುನಾಡಿನಲ್ಲಿ ಕೊರಜ್ಜನ ಶಕ್ತಿ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಅನ್ಯಾಯ ಮಾಡಿದವರಿಗೆ ಕೊರಗಜ್ಜನೇ ಶಿಕ್ಷೆ ನೀಡಿದ್ರಾ ಅನ್ನುವ ಮಾತುಗಳು ಈಗ ಚರ್ಚೆ ನಡೆಯುತ್ತಿದೆ. ಏಕೆಂದರೆ ಕೊರಗ್ಗಜನ ಕಾಣಿಕೆ ಡಬ್ಬವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಓರ್ವ ಏಕಾಏಕಿ ಕಳೆದ ತಿಂಗಳು ಸಾವನಪ್ಪಿದ್ದಾನೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಇದರಿಂದ ಭಯಗೊಂಡಿರುವ ಇನ್ನುಳಿದ ಆರೋಪಿಗಳು ಇದೀಗ ಕೊರಗಜ್ಜನ ಬಳಿ ಅಭಯಾ ನೀಡುವಂತೆ ಅಂಗಲಾಚಿದ್ದಾರೆ.

ನಗರದ ಎಮ್ಮೆಕೆರೆ ಸೇರಿದಂತೆ ಹಲವೆಡೆ ದೈವಸ್ಥಾನಗಳಿಗೆ ತೆರಳಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳು ಕೊರಗಜ್ಜ ಕೋಲೋತ್ಸವದಲ್ಲಿ ಕ್ಷಮಾಪಣೆ ಕೇಳಲು ಬಂದ ಕುತೂಹಲಕಾರಿ ಘಟನೆ ನಗರದ ಎಮ್ಮೆಕೆರೆಯಲ್ಲಿ ನಡೆದಿದೆ.


ಕೊರಗಜ್ಜ ನೇಮಕ್ಕೆ ಆರೋಪಿಗಳಲ್ಲಿ ಒಬ್ಬಾತ ಬಂದಿದ್ದರೂ, ಕೊರಗಜ್ಜ ಮಾತ್ರ ಅತನಿಗೆ ಕ್ಷಮೆ ನೀಡಲಿಲ್ಲ. ಈ ಕ್ಷೇತ್ರದಲ್ಲಿ ಬಬ್ಬುಸ್ವಾಮಿ ಪ್ರಧಾನ ದೈವವಾದ ಕಾರಣ ಅವನ ನೇಮೋತ್ಸವದಲ್ಲೇ ಈ ಸಮಸ್ಯೆಯನ್ನು ಇಟ್ಟು ನುಡಿ ಮತ್ತು ಕ್ಷಮಾಪಣೆ ಕೇಳಿ. ಅವನೇ ಈ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ ಎಂದು ನುಡಿ ಕೊಟ್ಟಿದ್ದಾರೆ. ಈ ಘಟನೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿಷಯ ಪೆÇಲೀಸರಿಗೆ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧಿಸಿ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

Related posts

Leave a Reply

Your email address will not be published. Required fields are marked *