Header Ads
Breaking News

ಚಿದಾನಂದ ಸವದಿ ಗೆಳೆಯರ ಬಳಗದಿಂದ ಕೊರೊನಾ ವಾರಿಯರ್ಸ್‍ಗಳಿಗೆ ಉಚಿತ ಊಟದ ವ್ಯವಸ್ಥೆ

ತಮ್ಮ ಹಾಗೂ ಕುಟುಂಬದ ಜೀವದ ಹಂಗನ್ನು ತೊರೆದು ಕೊರೊನಾವನ್ನು ಹೊಡೆದೋಡಿಸುವಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳಾದ , ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಪುರಸಭೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರಿಗೆ ಚಿದಾನಂದ ಸವದಿ ಗೆಳೆಯರ ಬಳಗದಿಂದ ಏಳು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ಉದ್ದಿಮೆದಾರರು ಹಾಗೂ ಸಮಾಜಸೇವಕರಾದ ಸಂತೋಷ ಸಾವಡಕರ ಹೇಳಿದರು.  ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪೆÇಲೀಸ್ ಇಲಾಖೆ ಪುರಸಭೆ ಇಲಾಖೆಯವರಿಗೆ ಊಟದ ವ್ಯವಸ್ಥೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಲಕ್ಷ್ಮಣ ಸವದಿಯವರು ಕಳೆದ ಬಾರಿ ಕೋರೋಣ ಸಂದರ್ಭದಲ್ಲಿಯೂ ಸುಮಾರು 2 ಕೋಟಿ ರೂಪಾಯಿ ವೆಚ್ಚದ ಗೋಧಿ ಮತ್ತು ಜೋಳ ವಿತರಣೆ, ಕೊರೊನಾ ವಾರಿಯರ್ಸ್‍ಗಳಿಗೆ ಸಹಾಯ, ಪ್ರವಾಹ ಸಂದರ್ಭದಲ್ಲಿ, ಬಡಕುಟುಂಬಗಳಿಗೆ ಸಹಾಯ, ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿಯೂ 50 ಲಕ್ಷ ರೂಪಾಯಿ ಸಂತು ವೆಚ್ಚದಲ್ಲಿ ಆಕ್ಸಿಜನ್ ಮಷೀನ್ ವಿತರಿಣೆ, ಮಾನವೀಯತೆ ಮೆರೆದಿದ್ದಾರೆ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಸ್ವಂತ ಖರ್ಚಿನಲ್ಲಿ ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿಯೂ ಕೂಡ ಕೆಟ್‍ಗಳನ್ನು ವಿತರಿಸಿದ ಅಷ್ಟೇ ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಬಡಕುಟುಂಬಗಳಿಗೆ ಕಾರ್ಮಿಕರಿಗೆ ಸಹಾಯ-ಸಹಕಾರ ಮಾಡುತ್ತ ಬಂದಿದ್ದೇನೆ ಇನ್ನುಮುಂದೆ ಆದರೂ ಕೂಡ ನಿರಂತರವಾಗಿ ಸಹಾಯ ಸಹಕಾರ ನೀಡುತ್ತೇನೆ. ಈಗಷ್ಟೇ ಚಿದಾನಂದ ಸವದಿ ಅಭಿಮಾನ ಬಳಗ ದಿಂದ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು. ಇದೆ ಸಮಯದಲ್ಲಿ ಬಿಜೆಪಿ ಯುವ ಮುಖಂಡರಾದ ಚಿದಾನಂದ ಸವದಿ, ಸಪ್ನಿಲ ಅಡಹಳ್ಳಿ ,ಸಚೀನ ಬುರ್ಲಿ , ಅಲ್ತಾಫ ಗಡ್ಡೇಕರ , ಸಂತೋಷ ಸಾವಡಕರ, ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *