Header Ads
Breaking News

ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಆಲ್ಬಮ್ ಸಾಂಗ್

ಜಗತ್ತಿನಾದ್ಯಂತ ತಲ್ಲಣಗೊಳಿಸಿದ್ದ ಕೊರೊನಾ ವೈರಸ್ ಕುರಿತು ಪೆÇಲೀಸ್ ಪೇದೆ ರಚಿಸಿರುವ ಜಾಗೃತಿ ಮೂಡಿಸುವ ಅಲ್ಬಮ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಕೊರೊನಾ ಜಾಗೃತಿ ಗೀತೆಯನ್ನು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಸದ್ಯ ಬೆಂಗಳೂರು ಸಿಎಆರ್ ದಕ್ಷಿಣ ವಿಭಾಗದ ಶ್ವಾನದಳದಲ್ಲಿ ಪೆÇಲೀಸ್ ಕಾನ್ಸ್‍ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೌಲಾಲಿ ಕೆ. ಆಲಗೂರ ಸ್ವತಃ ತಾವೇ ರಚಿಸಿ, ಹಾಡಿದ್ದಾರೆ.

ನೆಗಡಿ, ಕೆಮ್ಮು, ದಮ್ಮು, ಜ್ವರ ಬಂದ್ರೆ ಇರಲಿ ಸ್ವಲ್ಪ ಎಚ್ಚರಿಕೆ….. ಎಂಬ ಜಾಗೃತಿ ಗೀತೆಯನ್ನು ಕೂಡಾ ಮೌಲಾಲಿ ಕೆ ಆಲಗೂರ ಹಾಡಿದ್ದರು.

ಇತ್ತೀಚೆಗೆ ಸಾರ್ವಜನಿಕರಿಗೆ ಪೆÇಲೀಸ್ ಅಭಯ ಮತ್ತು ಬದಲಾದ ಸಂಚಾರ ನಿಯಮ ಕುರಿತ ರಚಿಸಿದ್ದ ಪೆÇಲೀಸ್ ಅಲ್ಬಮ್ ಸಾಂಗ್ ಕೂಡ ತುಂಬಾ ಜನಪ್ರಿಯತೆ ಪಡೆದಿತ್ತು.

ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್ ಸ್ಟೇಬಲ್ ಆದ ಮೌಲಾಲಿ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂ ಎಂಬುವರು ಹಾಡಿಗೆ ದನಿಯಾಗಿದ್ದಾರೆ.

ಮುಂಗಾರುಮಳೆ ಚಿತ್ರದ ಖ್ಯಾತಿಯ ಯೋಗರಾಜ್ ಭಟ್ ನಿರ್ದೇಶನದಲ್ಲಿ ಪರಪಂಚ ಚಿತ್ರದಲ್ಲಿ ಹುಚ್ಚ ವೆಂಕಟ್ ಹಾಡಿದ್ದ ಹುಟ್ಟಿದ್ದ ಊರನ್ನು ಬಿಟ್ಟು ಬಂದ ಮೇಲೆ. ಕಂಪೆÇೀಸಿಂಗ್ ನಲ್ಲೇ ಹೊಸ ಟ್ರಾಫಿಕ್ ಸಾಂಗ್ ವಿಡಿಯೊ ಆಲ್ಬಂ ಮಾಡಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ವೀಕ್ಷಣೆ ಮಾಡಿದವರು ಪೇದೆ ಮೌಲಾಲಿಯ ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ನಗರದ ಪೆÇಲೀಸ್ ಕಮಿಷನರ್ ಭಾಸ್ಕರ್‍ರಾವ್, ರೈಲ್ವೆ ಐಜಿಪಿ ಡಿ.ರೂಪಾ, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ ಮತ್ತು ಪೆÇಲೀಸ್ ಸಿಬ್ಬಂದಿ ಈ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ.

Related posts

Leave a Reply

Your email address will not be published. Required fields are marked *