Header Ads
Breaking News

ಕೊರೊನಾ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದ ಪುತ್ತೂರಿನ ದೇವಸ್ಥಾನ

ಕೊರೊನಾ ಸೋಂಕು ಭಾಧಿತರ ಆರೈಕೆಗೆ ಸರಕಾರ ಸಾಕಷ್ಟು ಕ್ರಮಗಳನ್ನೂ ಕೈಗೊಂಡಿದೆ. ಸರಕಾರದ ಈ ಕಾರ್ಯಕ್ಕೆ ಹಲವು ಸಂಘ-ಸಂಸ್ಥೆಗಳೂ ಸಾಥ್ ನೀಡಿದ್ದು, ಪುತ್ತೂರಿನ ದೇವಸ್ಥಾನದಲ್ಲಿ ಕೊರೊನಾ ಸೋಂಕಿತರ ಐಸೋಲೇಶನ್ ವಾರ್ಡ್ ಅನ್ನೂ ಸಿದ್ಧಗೊಳಿಸಿದೆ. ಕೊರೊನಾ ಲಾಕ್ ಡೌನ್ ನಿಂದ ಊರಿಗೆ ತೆರಳಲಾಗದೆ ಬಾಕಿ ಉಳಿದ 50 ಕ್ಕೂ ಮಿಕ್ಕಿದ ಕಾರ್ಮಿಕರಿಗೂ ಈ ದೇವಸ್ಥಾನ ದಿನಂಪ್ರತಿ ಊಟೋಪಚಾರವನ್ನೂ ನೀಡುತ್ತಿದೆ.

ಲಾಕ್‍ಡೌನ್ ಕಾರಣದಿಂದಾಗಿ ಉದ್ಯೋಗದ ನಿಮಿತ್ತ ಪುತ್ತೂರಿಗೆ ಆಗಮಿಸಿದ್ದ ಸುಮಾರು 50 ಕ್ಕೂ ಮಿಕ್ಕಿದ ಕಾರ್ಮಿಕರಿಗೆ ದಿನನಿತ್ಯ ಊಟೋಪಚಾರದ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದಲೇ ನೀಡಲಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಮೈಸೂರು, ಮಹಾರಾಷ್ಟ್ರ ಭಾಗದ ಈ ಕಾರ್ಮಿಕರು ಪುತ್ತೂರು ಜಾತ್ರೆಯಲ್ಲಿ ಮನೋರಂಜನಾ ಪರಿಕರಗಳನ್ನು ತಂದಿದ್ದು, ಜಾತ್ರೆ ಮುಗಿದ ತಕ್ಷಣವೇ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಕಾರ್ಮಿಕರ ತಂಡ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲೇ ತಂಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಈ ಕಾರ್ಮಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಕಲ್ಪಿಸಲಾಗಿದೆ. ಇದೀಗ ಕೊರೊನಾ ಭಾಧಿತರ ಐಸೋಲೇಶನ್ ವಾರ್ಡನ್ನು ಕೂಡಾ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. ಸುಮಾರು 42 ಪ್ರತ್ಯೇಕ ಕೊಠಡಿಗಳು ಈಗಾಗಲೇ ಸಿದ್ಧಗೊಂಡಿದ್ದು, ಇನ್ನೂ ಕೆಲವು ಕೊಠಡಿಗಳು ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಪ್ರತೀ ರೋಗಿಗೂ ಪ್ರತ್ಯೇಕ ಕೊಠಡಿ, ಹಾಸಿಗೆ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಈ ಐಸೋಲೇಶನ್ ವಾರ್ಡ್ ಒಳಗೊಂಡಿದೆ. ಅಲ್ಲದೆ ಇಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಬೇಕಾದ ನರ್ಸ್ ಹಾಗೂ ವೈದ್ಯರ ಸೌಲಭ್ಯವನ್ನೂ ಕಲ್ಪಿಸಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.ಕೊರೊನಾ ಮಹಾಮಾರಿ ತಡೆಗೆ ಸರಕಾರದ ಜೊತೆಗೆ ಸಂಘ-ಸಂಸ್ಥೆಗಳೂ ತೊಡಗಿಕೊಂಡಿದ್ದು, ಪುತ್ತೂರಿನ ಈ ದೇವಸ್ಥಾನವೂ ಕೊರೊನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತಿದೆ.

Related posts

Leave a Reply

Your email address will not be published. Required fields are marked *