Header Ads
Breaking News

ಕೊಲತಾರುಪದವಿನಲ್ಲಿ ಸುರಂಗ ಮಾರ್ಗ ಪತ್ತೆ

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ನಿಡ್ಡೋಡಿ ಗ್ರಾಮದ ಕೊಲತಾರುಪದವಿನಲ್ಲಿ ಸುರಂಗ ಮಾರ್ಗ ಪತ್ತೆಯಾಗಿದೆ.
ಕೊಲತ್ತಾರಪದವು ಪರಿಸರದಲ್ಲಿ ಕೆಂಪು ಕಲ್ಲಿನ ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ಈ ಸಂದರ್ಭದಲ್ಲಿ ಹೊಂಡವೊಂದು ಪತ್ತೆಯಾಗಿತ್ತು.

ಇದನ್ನು ಮೆಲ್ರೊಯ್ ಮೊರಾಸ್, ಶ್ರೀನಿವಾಸ ಗೌಡ, ಜೋಯ್ ಡಿಸೋಜ, ಸತೀಶ್ ವಂಟಿಮಾರ್ ಅವರು ಪರಿಶೀಲಿಸಿದಾಗ ಸುರಂಗ ಮಾರ್ಗವಿರುವುದು ಗಮನಕ್ಕೆ ಬಂದಿದೆ. ಭೂಮಿಯ ಮೇಲ್ಪದರಿಂದ 13 ಅಡಿ ಆಳವಿದ್ದು, ಒಳಭಾಗದಲ್ಲಿ ಸುಮಾರು 5 ಅಡಿ ವಿಸ್ತೀರ್ಣದಲ್ಲಿ ಸುರಂಗಮಾರ್ಗ ಪೂರ್ವ ದಿಕ್ಕಿನತ್ತ ಇದೆ. ಕೊಂಚ ದೂರದಲ್ಲಿ ಈ ಸುರಂಗ ಮಾರ್ಗಕ್ಕೆ ಅಡಲಾಗಿ ದೊಡ್ಡ ಕಲ್ಲುಗಳು ಬಿದಿದ್ದು, ಇನ್ನು ಮಾರ್ಗವು ಮುಂದವರಿದಿರುವ ಸಾಧ್ಯತೆ ಇದೆ. ನೀರಿನ ಒರತೆಯ ರಭಸಕ್ಕೆ ನೈಸರ್ಗಿಕವಾಗಿ ಇದು ಸೃಷ್ಟಿಯಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *