Header Ads
Breaking News

ಕೋಟಿ ಚೆನ್ನಯ್ಯ ಪಡುಮಲೆ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಮುಂದೂಡಿಕೆ

ಪುತ್ತೂರು: ಪಡುಮಲೆ ಕೋಟಿ ಚೆನ್ನಯರ ಮೂಲಸ್ಥಾನ ಹಾಗೂ ಜನ್ಮಸ್ಥಾನದಲ್ಲಿ ಎಪ್ರಿಲ್ 22ರಿಂದ 24ರವವರೆಗೆ ನಡೆಯಬೇಕಾಗಿದ್ದ ಪ್ರತಿಷ್ಠೆ  ಬ್ರಹ್ಮಕಲಶಾಭಿಷೇಕ ರದ್ದು ಮಾಡಲಾಗಿದೆ ಎಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು, ಸರ್ಕಾರದ ಹೊಸ ಮಾರ್ಗಸೂಚಿಗಳ ಅನ್ವಯ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಪಡುಮಲೆ ಕ್ಷೇತ್ರದ ಬ್ರಹ್ಮಕಲಶಾಭಿμÉೀಕವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಮುಂದಿನ ಮಾರ್ಗಸೂಚಿ ನೋಡಿಕೊಂಡು ಘೋಷಣೆ ಮಾಡಲಾಗುತ್ತದೆ. ಈವರೆಗೆ ಭಕ್ತಾದಿಗಳಿಂದ ಅದ್ಭುತ ಬೆಂಬಲ ದೊರಕಿದ್ದು, ಮುಂದಕ್ಕೂ ಸಹಕಾರವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

Related posts

Leave a Reply

Your email address will not be published. Required fields are marked *