Header Ads
Breaking News

ಹಾಸನ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯಿಂದ ಕೋವಿಡ್ ಜನಜಾಗೃತಿ ಪ್ರಚಾರಕ್ಕೆ ಚಾಲನೆ

ಹಾಸನ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಕೋವಿಡ್ ಜನ ಜಾಗೃತಿ ಪ್ರಚಾರ ವಾಹನಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೆÇೀಲಿಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಚಾಲನೆ ನೀಡಿದರು.ಕೊವಿಡ್ ಜನಜಾಗೃತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ವೃತ್ತ ನಿರೀಕ್ಷಕ ಶ್ರೀಕಾಂತ್, ಕೊವೀಡ್-19 ಬಗ್ಗೆ ತೆಗೆದು ಕೊಳ್ಳಬೇಕಾದ ಕ್ರಮದ ಕುರಿತು ಸಾರ್ವಜನಿಕರು ಜಾಗೃತರಾಗಬೇಕು. ವೈದ್ಯರು ಹಾಗೂ ಸರ್ಕಾರ, ತಾಲೂಕು ಆಡಳಿತ ನೀಡುವ ಸಲಹೆಯನ್ನು ಎಲ್ಲರು ಕಡ್ಡಾಯವಾಗಿ ಪರಿಪಾಲಿಸಬೇಕು ಹಾಗೂ ಕರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತೀಯ ರೆಡ್‍ಕ್ರಾಸ್ ಘಟಕದಿಂದ ಅರಿವು ಮೂಡಿಸುವ ಪ್ರಚಾರ ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು. 

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್-19 ಬಗ್ಗೆ ತೆಗೆದು ಕೊಳ್ಳಬೇಕಾದ ಕ್ರಮದ ಕುರಿತು ಅರಿವು ಮೂಡಿಸಲಾಗುತ್ತಿದೆ. ಆದರೂ ಹಳ್ಳಿಗಳಲ್ಲಿ ಕರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೋಮ್ ಕ್ವಾರಂಟೈನ್‍ನಲ್ಲಿ ಇರುವುದು ಹೇಗೆ ಎಂಬ ಅರಿವು ಕೆಲವರಿಗಿಲ್ಲ. ಕೋವಿಡ್ ನಿಯಮ ಪಾಲನೆ ಸಾಧ್ಯವಾಗದವರು ಕೋವಿಡ್ ಸೆಂಟರ್‍ನಲ್ಲಿ ಇರುವುದು ಒಳ್ಳೆಯದು ಎಂದರು.

ಈ ಸಂದರ್ಭ ಪಿಎಸ್‍ಐ ಶಿವನಗೌಡ. ಜಿ.ಪಾಟೀಲ್, ರೆಡ್‍ಕ್ರಾಸ್ ಸಂಸ್ಥೆ ತಾಲೂಕು ಘಟಕದ ಉಪಾಧ್ಯಕ್ಷ ಲಕ್ಷ್ಮಣ್, ನಿರ್ದೇಶಕರಾದ ರೇಣುಕಾ ಪ್ರಸಾದ್, ಧರಣೇಶ್, ಪುರಸಭೆ ಸದಸ್ಯ ಪ್ರಭಾಕರ್ ಇದ್ದರು.

Related posts

Leave a Reply

Your email address will not be published. Required fields are marked *