Header Ads
Breaking News

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಯಾವೆಲ್ಲ ಕಾರ್ಯಕ್ರಮ ರೂಪಿಸಿದ್ದೀರಿ : ಎ.ಸಿ.ವಿನಯ್‍ರಾಜ್ ಕಿಡಿ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ,ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಯಾವೆಲ್ಲ ಕಾರ್ಯಕ್ರಮಗಳನ್ನ ರೂಪಿಸಿದ್ದೀರಿ ಎಂದು ಪಾಲಿಕೆ ವಿಪಕ್ಷ ನಾಯಕ ಎ.ಸಿ.ವಿನಯ್‍ರಾಜ್ ಪ್ರಶ್ನಿಸಿದ್ರು. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಪರೀಕ್ಷೆಯ ವರದಿ ಸಿಗುವಾಗ ಮೂರ್ನಾಲ್ಕು ದಿನಗಳ ಆಗುತ್ತಿದೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯ ಇದೆ. ಹಾಗಾಗಿ 24 ಗಂಟೆಯೊಳಗೆ ಕೋವಿಡ್ ಟೆಸ್ಟ್ ಸಿಗುವಂತೆ ಮಾಡಲು ಶಾಸಕರಿಗೆ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೋರೋಣ ಒಂದನೇ ಅಲೆಯ ಸಂದರ್ಭ ಜಿಲ್ಲೆಗೆ ಬಂದ ವೆಂಟಿಲೇಟರ್ ಗಳ ಪೈಕಿ ಸುಮಾರು 17 ವೆಂಟಿಲೇಟರ್ ಗಳು ಜಿಲ್ಲೆಯ ವಿವಿಧ ತಾಲೂಕು ಕೇಂದ್ರ ಆಸ್ಪೆತ್ರೆಗಳಿಗೆ ಕೊಟ್ಟಿದ್ದು ಅದು ದೂಳು ಹಿಡಿದು ಬಿದ್ದಿದೆ. ಅದನ್ನು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ತಂದು ಇಲ್ಲಿ ಅಳವಡಿಸಿ ಜನರ ಜೀವ ಉಳಿಸುವ ಬಗ್ಗೆ ಇಲ್ಲಿಯ ಸಂಸದರು ಅಥವಾ ಶಾಸಕರು ಯಾಕೆ ಪ್ರಯತ್ನ ಮಾಡಿಲ್ಲ ಎಂದು ಪ್ರಶ್ನಿಸಿದರು. ಕೊರೊನಾ ತಡೆಗಟ್ಟುವಲ್ಲಿ ಮತ್ತು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಎರಡನೇ ಅಲೆ ಬರಲಿದೆ ಎಂಬ ಮುನ್ಸೂಚನೆ ಇದ್ದರು ಕೂಡ ಪೂರ್ವ ತಯಾರಿ ಮಾಡಲು ಸಂಪೂರ್ಣ ನಿರ್ಲಕ್ಷ ವಹಿಸಿದ ಕಾರಣ ಇಂದು ಸುಮಾರು ಲಕ್ಷದಷ್ಟು ಜನ ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದ ಮರಣಪಟ್ಟವರ ಸಂಖ್ಯೆ ಕಡಿಮೆ ಮಾಡಲು ಸರಕಾರ ಅದರಲ್ಲಿ ಎರಡು ವಿಧವಾಗಿ ವಿಂಗಡಣೆ ಮಾಡಿ ಜನರಿಂದ ಸತ್ಯಂಶ ಮುಚ್ಚಿಟ್ಟಿದೆ. ಇದೊಂದು ಕೊಲೆಗಡುಕ ಸರಕಾರವೇ ಎಂಬ ಸಂಶಯ ಮೂಡಿದೆ ಎಂದು ಅವರು ಹೇಳಿದರು .ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅನಿಲ್ ಕುಮಾರ್, ಅಪ್ಪಿ, ಪ್ರಕಾಶ್ ಸಾಲಿಯಾನ್, ಪ್ರವೀಣ್ ಚಂದ್ರ ಅಳ್ವಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *