Header Ads
Breaking News

ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ : ಮಾಜಿ ಸಚಿವ ರಮಾನಾಥ್ ರೈ

ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ರಮಾನಾಥ್ ರೈ ದೂರಿದ್ದಾರೆ. ಅವರು ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ದಿನನಿತ್ಯ ಕೂಲಿ ಮಾಡಿ ಬದುಕುವ ಜನರ ಪರಿಸ್ಥಿತಿ ಹೇಗೆ ಅನ್ನೋದನ್ನು ಸರ್ಕಾರ ತಿಳಿದುಕೊಳ್ಳಬೇಕು. ಸರಕಾರ ಸಾಮಾನ್ಯ ಮಟ್ಟದ ಆಹಾರ ಕಿಟ್ ವ್ಯವಸ್ಥೆ ಮಾಡಬೇಕು. ಕಟ್ಟಡ ಕಾರ್ಮಿಕ, ಆಟೋ ಡ್ರೈವರ್‍ಗಳಿಗೆ, ಮುಖ್ಯವಾಗಿ ವಲಸೆ ಕಾರ್ಮಿಕರು ಊರು ಬಿಟ್ಟರೆ ನಮ್ಮ ಕೆಲಸ ಕಾರ್ಯಗಳು ಸ್ತಬ್ಧವಾಗುತ್ತದೆ. ಅವರು ತಮ್ಮ ಊರಿಗೆ ಹೋಗದಂತೆ ಅವರ ಬಗ್ಗೆ ಗಮನಹರಿಸಬೇಕು. ಅವರಿಗಾಗಿ ಪ್ರತಿ ಪಂಚಾಯತ್‍ನಲ್ಲಿ ಗಂಜಿಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದ್ರು.
ಇನ್ನು ವಿದ್ಯುತ್ ನೀರಿನ ಬಿಲ್ ಮನ್ನ ಮಾಡಬೇಕು. ಕೆಲವೊಂದು ರಾಜ್ಯದಲ್ಲಿ ಮನ್ನ ಮಾಡಲಾಗಿದೆ. ಇಲ್ಲವಾದಲ್ಲಿ ಸಮಯಾವಕಾಶ ನೀಡಬೇಕು. ಎನ್‍ಜಿಓಗಳು ಕೆಲಸ ಕಾರ್ಯಗಳಿಗೆ ಸಹಕರಿಸಿದ್ದಲ್ಲಿ ಅವರನ್ನು ಶ್ಲಾಘಿಸಬೇಕು ಎಂದ್ರು.

Related posts

Leave a Reply

Your email address will not be published. Required fields are marked *