Header Ads
Breaking News

ಕೋವಿಡ್ ನಿಯಂತ್ರಣದ ತುರ್ತು ಸಭೆಯಲ್ಲಿ ಜಟಾಪಟಿ : ಸದಸ್ಯರ ನಡುವೆ ಹೊಯ್ ಕೈ

ಬಂಟ್ವಾಳ: ಕೋವಿಡ್ ನಿಯಂತ್ರಣದ ಹಿನ್ನಲೆಯಲ್ಲಿ ವಾರ್ ರೂಮ್ ಏರ್ಪಡಿಸುವ ಕುರಿತು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಕರೆದ ತುರ್ತುಸಭೆಯಲ್ಲಿ ಕೆಲ ಹೊತ್ತು ಗದ್ದಲ ಉಂಟಾಗಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಹೊಯ್ ಕೈ, ಜಟಾಪಟಿಗೆ ವೇದಿಕೆಯಾಯಿತು.

ತಾವು ಜವಬ್ದಾರಿಯುತ ಜನಪ್ರತಿನಿಧಿಗಳು ಎನ್ನುವುದನ್ನೇ ಮರೆತು ತಹಶೀಲ್ದಾರ್ ಸಹಿತ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಪುರಸಭಾ ಸದಸ್ಯರು ಅಸಂವಿಧಾನಿಕ ಪದ ಬಳಿಸಿ ಕಚ್ಚಾಡಿದ್ದು ಸಭೆಯ ಘನತೆಗೆ ಧಕ್ಕೆ ತಂದಿತು. ಸ್ವತಃ ಅಧ್ಯಕ್ಷರು ತಹಶೀಲ್ದಾರ್, ಮುಖ್ಯಾಧಿಕಾರಿ ಸಹಿತ ಇತರ ಸದಸ್ಯರು ಆಕ್ರೋಶಿತ ಸದಸ್ಯರನ್ನು ಸಮಧಾನ ಪಡಿಸಲು ಮುಂದಾದರೂ ಕೇಳದೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಸಿ ಹೊಯ್ ಕೈ ಹಂತದವರೆಗೆ ಮುಂದುವರಿಯಿತು.

ಅಧ್ಯಕ್ಷ ಮಹಮ್ಮದ್ ಶರೀಫ್ ಸಭೆ ಕರೆದಿರುವುದರ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಎಸ್.ಡಿ.ಪಿ.ಐ. ಸದಸ್ಯ ಮುನೀಶ್ ಆಲಿ ಮಾತನಾಡಿ ಕೊವಿಡ್ ಕುರಿತಾದ ಪುರಸಭಾ ವ್ಯಾಪ್ತಿಯ ಯಾವುದೇ ಮಾಹಿತಿಗಳು ನಮಗೆ ದೊರಕುತ್ತಿಲ್ಲ ಎಂದು ಆರೋಪಿಸಿದರು. ವಿಪಕ್ಷ ಸದಸ್ಯ ಗೋವಿಂದ ಪ್ರಭು ಮಾತನಾಡಿ, ಪುರಸಭೆಯಲ್ಲಿ ಯಾರಾದರೂ ಮೃತಪಟ್ಟರೆ, ಕೋವಿಡ್ ಸೋಂಕಿಗೆ ಒಳಗಾದರೆ ಏನು ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಬೇಕು. ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಗುರುತಿಸುವಲ್ಲಿ ಇಬ್ಬಗೆ ನೀತಿ ಅನುಸರಿಸಲಾಗುತ್ತದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ಬರುತ್ತಿವೆ. ಯಾರೂ ಇದರ ಕುರಿತು ಗಮನಹರಿಸಿಲ್ಲ ಎಂದರು.

ಕರೋನಾ ಲಸಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ಸರಕಾರ ಸತ್ತಿದೆ ಎನ್ನುವ ಆಡಳಿತ ಪಕ್ಷದ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಆರೋಪ ವಿಪಕ್ಷ ಬಿಜೆಪಿ ಸದಸ್ಯ ಹರಿಪ್ರಸಾದ್ ಅವರನ್ನು ಕೆರಳಿಸಿತು. ಸರಕಾರ ಸತ್ತಿಲ್ಲ, ಅದು ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಬಂಟ್ವಾಳ ಪುರಸಭೆಯ ಆಡಳಿತ ಸತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ಸಂದರ್ಭ ಇಬ್ಬರು ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ತಾರಕ್ಕಕ್ಕೇರಿದಾಗ ಸದಸ್ಯ ಗೋವಿಂದ ಪ್ರಭು ಳಅವರು ಹರಿಪ್ರಸಾದ್ ಬೆಂಬಲವಾಗಿ ನಿಂತು ಮಾತಿಗಿಳಿದರು. ಆಗ ಸಿದ್ದೀಕ್ ಗುಡ್ಡೆಯಂಗಡಿ ಮತ್ತು ಗೋವಿಂದ ಪ್ರಭು ಮಧ್ಯೆ ಏರಿದ ಧ್ವನಿಯಲ್ಲಿ ಚರ್ಚೆ ನಡೆದು ಹೊಯ್ ಕೈ ನಡೆಯಿತು. ಪರಸ್ಪರ ಅಸಂವಿಧಾನಿಕ ಪದ ಪ್ರಯೋಗಿಸಿ ಮಾತನಾಡಿದ ಸದಸ್ಯರು ಹೊರಗೆ ಬಾ ನೋಡಿಕೊಳ್ಳುತ್ತೇನೆ ಎನ್ನುವಷ್ಟರ ಮಟ್ಟಿಗೆ ಕಚ್ಚಾಡಿಕೊಂಡರು. ಈ ಸಂದರ್ಭ ಆಡಳಿತ ಪಕ್ಷದ ಸದಸ್ಯ ಜನಾರ್ದನ ಚಂಡ್ತಿಮಾರ್ ಮಾತನಾಡಿ, ಸಾವು ನೋವಿನ ಸಂದಿಗ್ದ ಕಾಲದಲ್ಲಿ ಈ ರೀತಿ ಕಚ್ಚಾಡುವುದು ಸರಿಯಲ್ಲ ಎಂದು ಸದಸ್ಯರಿಬ್ಬರನ್ನು ಸಮಧಾನ ಪಡಿಸಿದರು.ಕರೊನಾ ಸೋಂಕಿತರ ಮನೆಯವರು ಕಷ್ಟದಲ್ಲಿದ್ದರೆ ಅವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು. ಪುರಸಭೆಯ ಆರೋಗ್ಯ ನಿರೀಕ್ಷಕ ಹಾಗೂ ತಹಶೀಲ್ದಾರ್ ವಿರುದ್ದ ರೇಗಿದ ಜನಾರ್ದನ ಚೆಂಡ್ತಿಮಾರ್ ಸಭೆ ನಡೆಸಿ ಎಂದು ಹೇಳಲು ನೀವ್ಯಾರು ಎಂದು ಆರೋಗ್ಯ ನಿರೀಕ್ಷಕರ ವಿರುದ್ದ ಗರಂ ಆದರು.

ತಹಸೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ, ಕರೊನಾ ಕಡಿಮೆ ಆಗಿಲ್ಲ, ಮುಂದೇನಾಗಬೇಕು ಎಂಬುದನ್ನು ತಿಳಿಸಲು ನಾವಿಲ್ಲಿಗೆ ಬಂದಿದ್ದೇವೆ ಎಂದರು. ಅಧಿಕಾರಿಗಳಷ್ಟೇ ಜನಪ್ರತಿನಿಧಿಗಳಿಗೂ ಜವಬ್ದಾರಿಯಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮಾತನಾಡಿ, ಕಂಟೈನ್ಮೆಂಟ್ ವಲಯವನ್ನು ಪುರಸಭೆ ಗುರುತಿಸಬೇಕು. ಮನೆಯಿಂದ ಹೊರಗೆ ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದರೆ ವಾರ್ ರೂಮ್ ಮಾಡಿಕೊಂಡು ನಿಗಾ ಇರಿಸಬೇಕು ಎಂದರು. ಕೋವಿಡ್ ಕುರಿತ ನಿಗಾ ವಹಿಸಲು ಪುರಸಭೆಯಲ್ಲಿ ಸಹಾಯ ಕೇಂದ್ರ ರಚಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿ ಓದರು.

ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ನೋಡಲ್ ಅಧಿಕಾರಿ ಬಿಇಒ ಜ್ಞಾನೇಶ್, ಆರೋಗ್ಯ ನಿರೀಕ್ಷಕ ಜಯಶಂಕರ್ ಉಪಸ್ಥಿತರಿದ್ದರು.ಸದಸ್ಯರಾದ ಎ.ಗೋವಿಂದ ಪ್ರಭು, ಮುನೀಶ್ ಆಲಿ, ಸಿದ್ದೀಕ್ ಗುಡ್ಡೆಯಂಗಡಿ, ಜೀನತ್ ಫಿರೋಜ್, ಹರಿಪ್ರಸಾದ್, ಗಂಗಾಧರ್ ಮೊದಲಾದವರು ವಿವಿಧ ವಿಚಾರಗಳ ಕುರಿತು ಚರ್ಚಿಸಿದರು.

Related posts

Leave a Reply

Your email address will not be published. Required fields are marked *