Header Ads
Breaking News

ಕೋವಿಡ್ ಪರಿಹಾರ ಕೇವಲ ರೂ,3000ಕ್ಕೆ ವಿರೋಧ : ಮೇ 21ರಂದು ರಾಜ್ಯವ್ಯಾಪಿ ಪ್ರತಿಭಟನೆ

ಎರಡನೆ ಕೋವಿಡ್ ಅಲೆಗೆ ಸಿಲುಕಿ ನಿರುದ್ಯೋಗಿ ಗಳಾಗಿರುವ ರಾಜ್ಯದ ನೋಂದಾಯಿತ/ವಲಸೆ ಕಾರ್ಮಿಕ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 10 ಸಾವಿರ ಸಹಾಯಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ನಿರ್ಮಾಣ ವಲಯದ ಕಾರ್ಮಿಕರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಮೇ21 ರಿಂದ ತೀವ್ರ ಹೋರಾಟ ನಡೆಸುತ್ತಿದ್ದರೂ ಇದೀಗ ಸರಕಾರ ಕೇವಲ ರೂ,3000 ಪರಿಹಾರ ಘೋಷಿಸಿದೆ. ಇದನ್ನು ಕೂಡಲೇ ಮಾರ್ಪಡಿಸಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮುಂದಿನ ಮೂರು ತಿಂಗಳು ವರೆಗೆ ಮಾಸಿಕ 10ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ.

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೆ ಸುಮಾರು 9 ಸಾವಿರ ಕೋಟಿ ಸೆಸ್ ಸಂಗ್ರಹವಾಗಿದೆ. ವಾರ್ಷಿಕವಾಗಿ ಸುಮಾರು 6 ಕೋಟಿಯಷ್ಟು ಸೆಸ್ ಸಂಗ್ರಹವಾಗುತ್ತಿದೆ.ರಾಜ್ಯದ ಕಟ್ಟಡ ಕಾರ್ಮಿಕರು ಕಳೆದ ಒಂದು ವರ್ಷದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಮತ್ತೆ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ.ಕನಿಷ್ಟ 4-5 ಜನರಿರುವ ಕುಟುಂಬಗಳಿಗೆ ಕನಿಷ್ಟ ವಾರಕ್ಕೆ 3000 ರೂಪಾಯಿಗಳು ಅಗತ್ಯವಿದೆ. ಈ ಹಿನ್ನಲೆಯಲ್ಲಿ ನಿರುದ್ಯೋಗಿಗಳಾಗಿದ್ದ ಕಟ್ಟಡ ಕಾರ್ಮಿಕರಿಗೆ ವಾರಕ್ಕೆ ಕನಿಷ್ಠ 2500ರೂಪಾಯಿ ಮತ್ತು ಮಾಸಿಕ ರೂ10000 ಕೋವಿಡ್ ಪರಿಹಾರ ಕಲ್ಯಾಣ ಮಂಡಳಿಯಿಂದ ನೀಡಬೇಕೆಂಬುದು ಸಿಐಟಿಯುನ ಒತ್ತಾಯವಾಗಿದೆ. ಆದರೆ ನಮ್ಮ ಬೇಡಿಕೆಯನ್ನು ಸರಕಾರ ಭಾಗಶಃ ಮೂರನೇ ಒಂದು ಭಾಗವನ್ನು ಮಾತ್ರ ಈಡೇರಿಸಿದೆ.ಇದು ಸ್ವಾಗತಾರ್ಹವಾಗಿದೆ ಆದರೆ ಇದು ಕಟ್ಟಡ ಕಾರ್ಮಿಕರ ಬದುಕಿಗೆ ಕಿಂಚಿತ್ತೂ ಸಹಕಾರಿಯಾಗುವುದಿಲ್ಲ. ಆದ್ದರಿಂದ ಕಾರ್ಮಿಕ ಸಚಿವರೂ ಮತ್ತು ಕಲ್ಯಾಣ ಮಂಡಳಿ ಹಾಗೂ ಸರಕಾರ ಕೂಡಲೇ ಈ ಪರಿಹಾರವನ್ನು ರೂಂ, 10ಸಾವಿರಕ್ಕೆ ಹೆಚ್ಚಿಸಿ ಮಾರ್ಪಡಿಸಿ ಘೋಷಿಸಬೇಕೆಂದು ಒತ್ತಾಯಿಸಲಾಗಿದೆ. ಇದೀಗ ಮೇ 17ರಿಂದ 21ರವರೆಗೆ ಕಟ್ಟಡ ಕಾರ್ಮಿಕರು ನಡೆಸುತ್ತಿರುವ ಪ್ರಚಾರಾಂದೋಲನ ಭಾಗವಾಗಿ ರೂ 3000ದ ಬದಲು ರೂ,10000 ಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಮೇ 21ರಂದು ಮನೆ ಮನೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *