Header Ads
Breaking News

ಕೋವಿಡ್ ರೋಗ ಲಕ್ಷಣ ಬಂದರೆ ವೈದ್ಯರ ಸಲಹೆ ಪಡೆಯಿರಿ : ವೈದ್ಯ ಡಾ. ನಟರಾಜ್ ಹೇಳಿಕೆ

ಹೊಳೆನರಸೀಪುರ : ರೋಗ ಲಕ್ಷಣಗಳು ಕಂಡು ಬಂದವರು ತಕ್ಷಣ ವೈದ್ಯರ ಸಲಹೆ ಪಡೆದು ಕೋವಿಡ್ ಸೆಂಟರ್ ಗೆ ದಾಖಲಾಗುವುದು ಒಳ್ಳೆಯದು ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯ ವೈದ್ಯ ಡಾಕ್ಟರ್ ನಟರಾಜ್ ತಿಳಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಅಳವಡಿಸಿರುವ ವಾರ್ ರೂಮ್ ನ ವಿಶೇಷತೆಯನ್ನು ತಿಳಿಸುತ್ತ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ 150 ಹಾಸಿಗೆಯ ವ್ಯವಸ್ಥೆಯನ್ನು ಕೊರೋನ ಸೊಂಕಿತರಿಗೆ ಮಾಡಲಾಗಿದೆ. ಇದರ ಜೊತೆಗೆ 5ಐ ಸಿಯು ಬೆಡ್ ಗಳ ಸೌಲಭ್ಯವನ್ನು ಒದಗಿಸಲಾಗಿದೆ.ದಿನದ ಎಲ್ಲಾ ಸಮಯದಲ್ಲೂ ವೈದ್ಯರು ರೋಗಿಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ತುಂಬಾ ಜನರು ಗುಣಮುಖರಾಗಿ ಹೋಗಿದ್ದಾರೆ. ಪ್ರಸ್ತುತ 121 ಮಂದಿ ಕೊರೋನ ಸೊಂಕಿತರು ಇದ್ದು ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ನಮ್ಮ ಸಿಬ್ಬಂದಿ ಹಾಗೂ ವೈದ್ಯರೆಲ್ಲರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .ಗುಣಮಟ್ಟದ ಆಹಾರ ಪದಾರ್ಥಗಳು ಮತ್ತು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಕೊರೋನ ಟೆಸ್ಟಿಂಗ್‍ಗೆ ಸ್ಯಾಂಪಲ್ ಕೊಟ್ಟ ನಂತರ ವ್ಯಕ್ತಿ ಸಪರೇಟ್ ಆಗಿ ಇರಬೇಕು. ನೆಗೆಟಿವ್ ಬಂದರೆ ಸಮಸ್ಯೆ ಇಲ್ಲ. ಪಾಸಿಟಿವ್ ಬಂದವರು ಕಡ್ಡಾಯವಾಗಿ ಚಿಕಿತ್ಸೆಗೆ ದಾಖಲಾಗಿ. ಕೆಲವು ಮಂದಿ ತಮ್ಮ ಮನೆಯಲ್ಲೇ ಇದ್ದರೆ, ಸೊಂಕೀತರು ಮೊದಲ ವಾರದ ನಂತರ ಎಚ್ಚರಿಕೆಯಿಂದ ಇರಬೇಕು. ಕೆಮ್ಮು, ಉಸಿರಾಟದ ತೊಂದರೆಗಳು ಕಾಣಿಸಿಕೊಂಡರೆ ಕೋವಿಡ್ ಸೆಂಟರ್‍ಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಹಿರಿಯ ವೈದ್ಯಾಧಿಕಾರಿ ಡಾ. ಹೆಚ್. ಕೆ ರಮೇಶ್ ಸಾರ್ವಜನಿಕರು ಭಯದಿಂದ ಹೊರಬನ್ನಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿ, ಯಾವುದೇ ಲಕ್ಷಣಗಳು ಕಂಡು ಬಂದವರು ತಕ್ಷಣ ವೈದ್ಯರ ಸಲಹೆ ಪಡೆದು ಕೊಂಡು ಚಿಕಿತ್ಸೆ ಪಡೆಯಿರಿ. ಮಿತಿಮೀರಿದಾಗ ಬಂದರೆ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪರೀಕ್ಷೆ ಮಾಡಿಸಿ ಕೊಳ್ಳದೆ ಇದ್ದರೂ, ಲಕ್ಷಣಗಳು ಕಂಡು ಬಂದರೆ ದಾ ಖಲು ಮಾಡಿ ಕೊಂಡು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ್ ಲಕ್ಷ್ಮೀಕಾಂತ್ ಮಾತನಾಡಿ ಶಾಸಕರ ಹಿತಾಸಕ್ತಿಯ ಮೇರೆಗೆ ಆಸ್ಪತ್ರೆಗೆ ಉತ್ತಮ ಸೌಲಭ್ಯಗಳು ದೊರಕುತ್ತಿವೆ. ವಿಶೇಷವಾಗಿ ಇಲ್ಲೇ ರಕ್ತ ಪರೀಕ್ಷೆ ಘಟಕ, ಸಿಟಿ ಸ್ಕ್ಯಾನ್ ಘಟಕ ಸ್ಥಾಪನೆ ಆಗಲಿದೆ ಎಂದು ತಿಳಿಸಿದರು. ಇದರ ಜೊತೆಗೆ ಆಕ್ಷಿಜನ್ ಘಟಕವನ್ನು ತೆರೆಯಲು ಅನುಮತಿಗಾಗಿ ಕೋರಲಾಗಿದೆ. ಇದೆಲ್ಲದರ ಜವಾಬ್ದಾರಿ ಹಿಂದೆ ಮಾನ್ಯ ಶಾಸಕರಾದ ಹೆಚ್ ಡಿ ರೇವಣ್ಣ ಅವರ ಪರಿಶ್ರಮದಿಂದ ಆಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೈದ್ಯರಾದ ನಾಗೇಂದ್ರ,ಧನಶೇಕರ್,ವಿಜಯಕುಮಾರ್, ವಿನೋದ್, ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *