Header Ads
Breaking News

ಕೋವಿಡ್ ಸರಪಳಿ ಮುರಿಯುವ ಹೊಣೆಗಾರಿಕೆ ನಮ್ಮ ಮೇಲಿದೆ- ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮೇ ೭ರಂದು ಶಾಸಕರ ಕಚೇರಿಯಲ್ಲಿ ತಮ್ಮ ನೇತೃತ್ವದ ವಾರ್‌ರೂಮ್ ಪ್ರಮುಖರ ಸಭೆಯನ್ನು ನಡೆಸಿ ಜನರ ಕರೆಗಳಿಗೆ ಸ್ಪಂದಿಸಿದ ರೀತಿಯ ಕುರಿತು ವಿವರ ಪಡೆದರು.

ಬಳಿಕ ವಾರ್‌ರೂಮ್ ಪ್ರಮುಖರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಕುರಿತು ತೃಪ್ತಿ ಇದೆ. ಬಂಟ್ವಾಳದಲ್ಲಿ ಕೊರೊನಾ ಸರಪಳಿಯನ್ನು ಮುರಿಯುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು.
ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲೂ ಕೊರೊನಾ ವೇಗವಾಗಿ ಹಬ್ಬುತ್ತಿದ್ದು, ಇದರ ನಿಯಂತ್ರಣಕ್ಕೆ ಗ್ರಾಮ ಮಟ್ಟದಲ್ಲಿಯೂ ಕೆಲಸ ಮಾಡಬೇಕು. ನೀವು ಜನರ ಆರೋಗ್ಯದ ಕುರಿತು ಯಾವುದೇ ಸೇವೆ ನೀಡಿದರೂ, ಅದರ ಅಂಕಿಅಂಶವನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.


ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಸ್ಥಳೀಯ ಬಿಜೆಪಿ ಗ್ರಾಮ ಸಮಿತಿಯನ್ನು ಯಾವ ರೀತಿ ಸಕ್ರೀಯಗೊಳಿಸಬೇಕು ಎಂಬುದರ ಕುರಿತು ವಿವರಿಸಿದರು.
ವಾರ್‌ರೂಮ್‌ನ ಆಯಾಯಾ ಜವಾಬ್ದಾರಿ ಇದ್ದವರು ತಮ್ಮ ಕಾರ್ಯದ ಕುರಿತು ವಿವರ ನೀಡಿದ್ದು, ಬಿ.ದೇವದಾಸ್ ಶೆಟ್ಟಿ ಅವರು ೩೦ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿರುವುದು, ಪ್ರದೀಪ್ ಅಜ್ಜಿಬೆಟ್ಟು ಹಾಗೂ ಪುರುಷೋತ್ತಮ ಶೆಟ್ಟಿ ಅವರು ಆಂಬ್ಯುಲೆನ್ಸ್ಗೆ 8 ಕರೆಗಳು ಬಂದಿದ್ದು, ಎಲ್ಲದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. 15 ಮಂದಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುದರ್ಶನ್ ತಿಳಿಸಿದರು.
ರವೀಶ್ ಶೆಟ್ಟಿ ಅವರು ವ್ಯಾಕ್ಸಿನೇಶನ್ ಕಾರ್ಯದ ಮಾಹಿತಿ, ಪ್ರಕಾಶ್ ಅಂಚನ್ ಅವರು ೫ ಮಂದಿಗೆ ಆಯುಷ್ಮಾನ್ ಯೋಜನೆ ವ್ಯವಸ್ಥೆ, ಮನೋಜ್ ಕೋಟ್ಯಾನ್ ಅವರು ಕಚೇರಿಗೆ ಕರೆಗಳ ವ್ಯವಸ್ಥೆಯ ವಿವರ ನೀಡಿದರು. ಔಷಧ ವ್ಯವಸ್ಥೆಯ ಕುರಿತು ದೇವಿಪ್ರಸಾದ್ ಶೆಟ್ಟಿ, ಶವಸಂಸ್ಕಾರದ ಕುರಿತು ಕೇಶವ ದೈಪಲ ಅವರು ಮಾಹಿತಿ ನೀಡಿದರು.
ವಾರ್‌ರೂಮ್ ಸದಸ್ಯರಾದ ಡೊಂಬಯ ಅರಳ, ಪವನ್ ಶೆಟ್ಟಿ, ವಜ್ರನಾಥ ಕಲ್ಲಡ್ಕ, ಯಶೋಧರ ಕರ್ಬೆಟ್ಟು, ಮೋನಪ್ಪ ದೇವಸ್ಯ, ಅಶ್ವಥ್ ರಾವ್, ಪ್ರಭಾಕರ ಪ್ರಭು, ಅರುಣ್ ರೋಷನ್, ಪ್ರಣಾಮ್‌ರಾಜ್, ಸೀತಾರಾಮ ಪೂಜಾರಿ, ರಮನಾಥ ರಾಯಿ, ಪ್ರಕಾಶ್ ಬೆಳ್ಳೂರು, ಉಮೇಶ್ ಅರಳ, ಮಹೇಶ್ ಶೆಟ್ಟಿ, ಗಣೇಶ್ ರೈ, ದಿನೇಶ್ ಅಮ್ಟೂರು, ದಿನೇಶ್ ದಂಬೆದಾರು, ದಾಮೋದರ್ ನೆತ್ತರಕೆರೆ ಮೊದಲಾದವರು ಉಪಸ್ಥಿತರಿದ್ದರು.

 

 

Related posts

Leave a Reply

Your email address will not be published. Required fields are marked *