Header Ads
Breaking News

ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೇರಳದಲ್ಲಿ ಲಾಕ್ ಡೌನ್

ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದು ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಜನರು ಕ್ಯಾರೇ ಅನ್ನದೆ ತಿರುಗಾಡುತ್ತಿರುವುದು ಕಂಡುಬಂತು. ರಸ್ತೆಗಳಲ್ಲಿ ವಾಹನದ ಸರತಿ ಸಾಲು ಕಂಡುಬಂತು.
ಕೋವಿಡ್ ಸೋಂಕಿನ ಭೀಕರತೆಯನ್ನು ಜನತೆ ಪರಿಗಣಿಸುತ್ತಿಲ್ಲ. ಅನಾವಶ್ಯಕವಾಗಿ ಜನರು ವಾಹನಗಳನ್ನು ತೆಗೆದುಕೊಂಡು ಸಂಚರಿಸುತ್ತಿದ್ದಾರೆ. ಇನ್ನು ಮೂರನೇ ದಿನವೂ ಕಾಸರಗೋಡಿನಲ್ಲಿ ಲಾಕ್‍ಡೌನ್ ಯಶಸ್ವಿ ಕಾಣುತ್ತಿಲ್ಲ. ಕಾಸರಗೋಡು, ತಳಂಗರೆ, ಕಾಂಞಗಾಡ್, ಉಪ್ಪಳ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಕಂಡುಬಂತು. ಇನ್ನು ಪೊಲೀಸರು ವಾಹನಗಳನ್ನು ತಪಾಸಣೆಗೊಳಿಸಿ ಸಂಚರಿಸಲು ಅವಕಾಶವನ್ನು ಮಾಡಿಕೊಡುವ ದೃಶ್ಯವೂ ಕಂಡುಬಂತು.

Related posts

Leave a Reply

Your email address will not be published. Required fields are marked *