Header Ads
Breaking News

ಜಯಕರ್ನಾಟಕ ಸಂಘಟನೆ ವತಿಯಿಂದ ಕೋವಿಡ್-19 ಕುರಿತು ಜಾಗೃತಿ ಕಾರ್ಯಕ್ರಮ

ಜಯಕರ್ನಾಟಕ ಸಂಘಟನೆ ವತಿಯಿಂದ ಕೋವೀಡ್ 19 ಜಾಗೃತೆ ಮೂಡಿಸಲು ಪ್ರತೀ ಗ್ರಾಮಗಳಿಗೆ ಮೂರು ದಿನಗಳವರೆಗೆ ಆಟೋ ಧ್ವನಿವರ್ಧಕ ಚಾಲನೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಗ್ರಾಮೀಣ ಭಾಗದ ಸೋಂಕಿತರನ್ನು ಐಸೊಲೇಷನ್ ಕೇಂದ್ರಕ್ಕೇ ಸೇರಿಸಿ ಸೋಂಕು ಹರಡುವುದನ್ನು ತಪ್ಪಿಸಬೇಕು ಎಂದು ತಹಶೀಲ್ದಾರ್ ನಟೇಶ್ ತಿಳಿಸಿದರು.

ಜಯಕರ್ನಾಟಕ ಸಂಘಟನೆ ವತಿಯಿಂದ ಕೋವೀಡ್ 19 ಜಾಗೃತೆ ಮೂಡಿಸಲು ಪ್ರತೀ ಗ್ರಾಮಗಳಿಗೆ ಮೂರು ದಿನಗಳವರೆಗೆ ಆಟೋ ಧ್ವನಿವರ್ಧಕ ಚಾಲನೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರುವ ಇಲ್ಲಿವರೆಗೂ ಪಟ್ಟಣದಲ್ಲಿ ಕೋವೀಡ್ ಸೊಂಕಿತರು ಹೆಚ್ಚಿದ್ದು ಈಗ ಅದು ಗ್ರಾಮಗಳಿಗೆ ವ್ಯಾಪಿಸಿದೆ.ಅದರಲ್ಲೂ ಗ್ರಾಮದಲ್ಲಿ ಕೋವೀಡ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಅವರಿಗೆ ಜಾಗೃತಿ ಮೂಡಿಸುವುದು ತಾಲೂಕು ಆಡಳಿತ ಪ್ರತೀ ಗ್ರಾಮಗಳಿಗೆ ಹೋಗಿ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಒ ರವಿಕುಮಾರ್, ಪಿಎಸ್‍ಐ ಎಸ್ ಜಿ ಪಾಟೀಲ್,,ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು, ಕಾರ್ಯಾಧ್ಯಕ್ಷ ಬಿ.ಎಲ್.ಲಕ್ಷ್ಮಣ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಬಂಡೆ ಮಂಜು, ಕೇಬಲ್ ಕೇಶವಮೂರ್ತಿ, ವಜೀರ್ ಅಹಮದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *