Header Ads
Breaking News

ಕೋವಿಡ್-19 ನಿಯಂತ್ರಿಸುವ ಹಿನ್ನೆಲೆ : ಮಂಜೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾಶ್ ಯೋಜನೆ

ಕೋವಿಡ್ 19 ನಿಯಂತ್ರಿಸುವ ನಿಟ್ಟಿನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಪದ್ಧತಿ ಮಾಶ್ ಯೋಜನೆ ಸಜ್ಜುಗೊಂಡಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಮಾಸ್ಕ್, ಸಾನಿಟರೈಸರ್, ಸಾಮಾಜಿಕ ಅಂತರ ಪಾಲಿಸುವಂತೆ ಜನರಿಗೆ ಮನವರಿಕೆ ಮಾಡಲು ಮಂಜೇಶ್ವರ ಪಂಚಾಯತನ್ನು ಕೋವಿಡ್ ಎರಡನೇ ಅಲೆಯಿಂದ ಸಂರಕ್ಷಣೆ ಮಾಡಲು ಪಂಚಾಯತ್ ವ್ಯಾಪ್ತಿಯಲ್ಲಿ ಶಾಲಾ ಅಧ್ಯಾಪಕರನ್ನು ನೇಮಿಸಿ ವಾರ್ಡು ಮಟ್ಟದಲ್ಲಿ ತಿಳುವಳಿಕಾ ತರಗತಿ ಜನರನ್ನು ರೋಗದಿಂದ ಸಂರಕ್ಷಿಸಲು ಬೇಕಾದ ಯೋಜನೆಗೆ ರೂಪುರೇಶೆ ನೀಡಲು ಸಭೆ ನಡೆಸಲಾಯಿತು.
ಮಂಜೇಶ್ವರ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಮಾಶ್ ಅಧ್ಯಾಪಕರ ಸಭೆ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಸಂಕಷ್ಟ ಕಾಲದಲ್ಲಿ ಅಧ್ಯಾಪಕರು ಸಲ್ಲಿಸುವ ಸೇವೆ ಸ್ತುತ್ಯಾರ್ಹವಾದುದು. ನಮ್ಮ ಪಂಚಾಯತಿನ ಎಲ್ಲಾ ವಾರ್ಡುಗಳಲ್ಲೂ ಜಾಗೃತಾ ಸಮಿತಿಯನ್ನು ರಚಿಸಿ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕೆಲಸ ಜರಗಬೇಕಾಗಿದೆ ಎಂದು ತಿಳಿಸಿದರು. ಪಂಚಾಯತ್ ಪ್ರಭಾರ ಕಾರ್ಯದರ್ಶಿ ಶ್ರೀ ಶೈಲೇಶ್ ಅಧ್ಯಾಪಕರ ಕರ್ತವ್ಯಗಳನ್ನು ವಿವರಿಸಿ ಸರಕಾರದ ಸುತ್ತೋಲೆಯನ್ನು ಓದಿ ಹೇಳಿದರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ಧೀಕ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶೆಣೈ, ಪಂಚಾಯತ್ ನೌಕರರಾದ ಶ್ರೀ ತಂಬಾನ್, ಜೀತೇಶ್, ಸೆಕ್ಟೆರಲ್ ಆಫೀಸರ್ ಶ್ರೀ ರಾಮಚಂದ್ರನ್, ಜೆ.ಹೆಚ್. ಐ ಮಹಮ್ಮದ್ ಮೊದಲಾದವರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *