Header Ads
Breaking News

ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನಿಂದ ಕಿಟ್ ವಿತರಣೆ

ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿಕೊಂಡಿರುವ ಸಾಮಾಜಿಕ ಕಾರ್ಯಕರ್ತರಿಗೆ ಕೋವಿಡ್ ಕೇರ್ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮವು ಉಡುಪಿಯಲ್ಲಿ ನಡೆಯಿತು.
ಸಂಘಟನೆಯ ಪಾಲುದಾರರಾದ ರವೀಂದ್ರ ಶೆಟ್ಟಿ ಮತ್ತು ಹರೀಶ್ ಕುಮಾರ್ ಅವರು ತಮ್ಮ ಉಡುಪಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು, ವೆಲ್‍ಫೇರ್ ಪಕ್ಷದ ಅಧ್ಯಕ್ಷರಾದ ಅಜೀಜ್ ಉದ್ಯಾವರ ವಿಶು ಶೆಟ್ಟಿ ಅಂಬಲಪಾಡಿ, ಮ್ಯಾಕ್ಸಿಮ್ ಶುಭಾಶ್‍ನಗರ ಅವರಿಗೆ ಕೋವಿಡ್ ಕಿಟ್‍ಗಳನ್ನು ನೀಡಿದರು.
ಇದೇ ವೇಳೆ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್‍ನ ರವೀಂದ್ರ ಶೆಟ್ಟಿ ಅವರು ಮಾತನಾಡಿ ಕೋವಿಡ್ ವೈರಸ್‍ನಿಂದ ಸಾವನ್ನಪ್ಪುವವರ ಅಂತಿಮ ವಿಧಿ ವಿಧಾನಗಳನ್ನು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಡಳಿತಕ್ಕೆ ಸುಮಾರು 500 ವೈದ್ಯಕೀಯ ಕಿಟ್‍ಗಳನ್ನು ದಾನ ಮಾಡುವ ಯೋಜನೆ ನಮ್ಮಲ್ಲಿದೆ. ನಮ್ಮ ಲಾಭದ ಒಂದು ಭಾಗವನ್ನು ಸಮಾಜಕ್ಕೆ ದಾನ ಮಾಡುವ ಸಲುವಾಗಿ ನಾವು ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು.
ಇನ್ನು ಕೋವಿಡ್ ಕಿಟ್‍ಗಳಲ್ಲಿ ಪಿಪಿಇ ಕಿಟ್‍ಗಳು, ವಿಟಮಿನ್ ಮಾತ್ರೆಗಳು, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ಥರ್ಮಲ್ ಗನ್, ಪಲ್ಸ್ ಆಕ್ಸಿಮೀಟರ್ ಇರುತ್ತದೆ.
ಈ ಸಂದರ್ಭದಲ್ಲಿ ಇಂಡಿಯನ್ ಚೇಂಬರ್ ಉಡುಪಿ ಅಧ್ಯಕ್ಷರಾದ ಎನ್.ಜಿ. ಸುಕುಮಾರ್, ಸಂಸ್ಥಾಪಕ ಅಧ್ಯಕ್ಷ ಚಿತ್ರಕುಮಾರ್, ಮಾಜಿ ಅಧ್ಯಕ್ಷ ವಿಜಯಕುಮಾರ ಉದ್ಯಾವರ, ಶಂಕರ್ ಉದ್ಯಾವರ, ನವೀನ್ ಆಮೀನ್, ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *