Header Ads
Breaking News

ಗೃಹರಕ್ಷಕರಿಗೆ ರೋಟರಿ ಕ್ಲಬ್‍ನಿಂದ ಫೇಸ್‍ಶೀಲ್ಡ್ ಕೊಡುಗೆ

#FaceShield donation by Rotary Club

ಕೋವಿಡ್ ಮಾರ್ಷಲ್ ಆಗಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಕೋವಿಡ್ ವೈರಾಣುವಿನಿಂದ ರಕ್ಷಿಸುವ ಸಲುವಾಗಿ ರೋಟರಿ ಕ್ಲಬ್ ಹಿಲ್‍ಸೈಡ್ ಮಂಗಳೂರು ಇದರ ವತಿಯಿಂದ ಇಪ್ಪತ್ತು ಸಾವಿರ ಮೌಲ್ಯದ 200 ಫೇಸ್ ಶೀಲ್ಡ್‍ಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೃಹ ರಕ್ಷಕ ದಳದ ಸಮಾದ್ವೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಕರ್ತವ್ಯ ಮಾಡುವ ಗೃಹರಕ್ಷಕರ ಬಗ್ಗೆ ಕಾಳಜಿಯಿಂದ ಫೇಸ್ ಶೀಲ್ಡ್ ವಿತರಿಸಿದ ರೋಟರಿ ಕ್ಲಬ್ ಸದಸ್ಯರುಗಳಿಗೆ ಧನ್ಯವಾದ ಸಮರ್ಪಿಸಿದರು. #FaceShield donation by Rotary Club
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಹಿಲ್‍ಸೈಡ್ ಇದರ ಅಧ್ಯಕ್ಷರಾದ ಸುರೇಶ್ ಕಿಣಿ ಹಾಗೂ ಸದಸ್ಯರುಗಳಾದ ಸತೀಶ್ ಬಿ.ಕೆ. ದಿನೇಶ್ ಮಲ್ಯ, ಅಶೋಕ್ ರಾವ್, ಪ್ರವೀಣ್ ಉಡುಪ ಹಾಗೂ ಗೃಹರಕ್ಷರುಗಳಾದ ರಮೇಶ್ ಭಂಡಾರಿ, ಸುನೀಲ್, ಸಂತೋಷ್ ಸಲ್ದಾನ, ಭವಾನಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *