Header Ads
Breaking News

ಘನತ್ಯಾಜ್ಯ ನಿರ್ವವಣೆ ಮಾಡದೆ ಜನರ ಮೇಲೆ ಬರೆ : ಪಾಲಿಕೆ ವಿಪಕ್ಷ ನಾಯಕ ಎ.ಸಿ. ವಿನಯ್ ರಾಜ್ ಆರೋಪ

ರಾಜ್ಯ ಮತ್ತು ನಗರದ ಆಡಳಿತದಲ್ಲಿ ಪರ್ಸಂಟೆಜ್ ಸರಕಾರವಿದೆ.ಸರಿಯಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡದೆ ಜನರ ಮೇಲೆ ಬರೆ ಎಳೆದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಎ.ಸಿ.ವಿನಯ್ ರಾಜ್ ಹೇಳಿದರು.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಪಾಲಿಕೆ ಘನ ತ್ಯಾಜ್ಯ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದ್ರೆ ಅದರ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಮಂಗಳೂರು ನಗರ ಸ್ವಚ್ಛ ಮಂಗಳೂರು ನಗರವಾಗಲು ಹಗಲು ರಾತ್ರಿ ದುಡಿದ ಶ್ರೀ ರಾಮಕೃಷ್ಣ ಮಠದ ಮೇಲೆ ಸದ್ಯ ಪಾಲಿಕೆ ಗದಾ ಪ್ರಹಾರ ಮಾಡುತ್ತಿದೆ. ಘನ ತ್ಯಾಜ್ಯದ ನಿರ್ವಹಣೆಯನ್ನ ಕಡಿಮೆ ವೆಚ್ಚದಲ್ಲಿ ನಿರ್ವಹಿಸುವೆ ಎಂದು ಸ್ಥಳೀಯ ಸಂಸ್ಥೆ ಮುಂದೆ ಬಂದ್ರೆ ಬಿಜೆಪಿಯವರು ರಾಮಕೃಷ್ಣ ಮಠವನ್ನ ಕಡೆಗಾಣಿಸಿದ್ದಾರೆ. ಕಾರ್ಪೊರೇಟ್ ಕಂಪನಿಯವರಿಗೆ ಹೊರ ಗುತ್ತಿಗೆ ನೀಡಿ ಕಿಕ್ ಬ್ಯಾಕ್ ಪಡೆಯುವ ಹುನ್ನಾರ ನಡೆಯುತ್ತಿದೆ. ಕೂಡಲೇ ಪಾಲಿಕೆಯಲ್ಲಿ ಸಭೆ ಕರೆದು ರಾಮಕೃಷ್ಣ ಮಠದ ಸಂಸ್ಥೆಗೆ ಘನ ತ್ಯಾಜ್ಯ ನಿರ್ವಹಣೆ ನೀಡಲಿ ಎಂದು ಆಗ್ರಹಿಸಿದರು.

 

Related posts

Leave a Reply

Your email address will not be published. Required fields are marked *