Header Ads
Breaking News

ಚಂಡಮಾರುತಕ್ಕೆ ಸಿಕ್ಕ ಟಗ್ ಪಲ್ಟಿ: ಓರ್ವನ ಶವ ಪತ್ತೆ: ಇಬ್ಬರು ಬಚಾವ್, ಐವರು ನಾಪತ್ತೆ

ಬೃಹತ್ ಮೀನುಗಾರಿಕಾ ಬೋಟ್ ಗಳನ್ನು ಎಳೆದುಕೊಂಡು ಬರುವ ಸಾಮಾರ್ಥ್ಯ ಹೊಂದಿರುವ ಟಗ್ ಚಂಡ ಮಾರುತಕ್ಕೆ ಸಿಲುಕಿ ಪಲ್ಟಿಯಾಗಿದ್ದು ಅದರಲ್ಲಿ ಎಂಟು ಮಂದಿಯ ಪೈಕಿ ಒರ್ವನ ಶವ ಪತ್ತೆಯಾಗಿದ್ದು, ಇಬ್ಬರು ಟ್ಯೂಬ್ ಬಳಸಿ ದಡ ಸೇರಿದರೆ ಉಳಿದ ಐವರು ನಾಪತ್ತೆಯಾಗಿದ್ದಾರೆ.


ಮಂಗಳೂರು ಮೂಲದ ಎನ್ನಲಾದ ಈ ಟಗ್ ಮಧ್ಯಾಹ್ನದ ಸುಮಾರಿಗೆ ಪಡುಬಿದ್ರಿಯ ಕಡಲತೀರದಲ್ಲಿ ಪಲ್ಟಿಯಾದ ಮಾದರಿಯಲ್ಲಿ ಪತ್ತೆಯಾಗಿದೆ. ಇದರ ಬಗ್ಗೆ ಮಾಹಿತಿ ಪಡೆಯಲು ಮೀನುಗಾರರು ಯತ್ನಿಸಿದರಾದರೂ ವಿಫಲರಾಗಿದ್ದಾರೆ.

ಇದೀಗ ಸಂಜೆಯಾಗುತ್ತಿದಂತೆ ಪಡುಬಿದ್ರಿಯ ನಡಿಪಟ್ಣ ಎಂಬಲ್ಲಿ ಕಡಲತೀರದಲ್ಲಿ ಒರ್ವನ ಶವ ಪತ್ತೆಯಾದರೆ, ಇಬ್ಬರು ಟ್ಯೂಬ್ ಬಳಸಿಕೊಂಡು ಕಟಪಾಡಿ ಮಟ್ಟುವಿನಲ್ಲಿ ದಡ ಸೇರಿದ್ದಾರೆ. ಉಳಿದ ಐವರು ಕಡಲಲ್ಲಿ ನಾಪತ್ತೆಯಾಗಿದ್ದಾರೆ. ಕಟಪಾಡಿಯಲ್ಲಿ ದಡ ಸೇರಿದ ಇಬ್ಬರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪತ್ತೆಯಾದ ಶವ ಪಲ್ಟಿಯಾದ ಟಗ್ ನಲ್ಲೇ ಇದ್ದ ವ್ಯಕ್ತಿಯ ಎಂಬುದು ಇನ್ನಷ್ಟೇ ತಿಳಿದು ಬರಲಿದೆ.

 

Related posts

Leave a Reply

Your email address will not be published. Required fields are marked *