Header Ads
Breaking News

ಚಿನ್ನಕ್ಕೆ ತಾಮ್ರ ಕಲಬೆರಕೆ ಮಾಡಿ ವಂಚನೆ ಆರೋಪ : ವ್ಯಕ್ತಿಯೊಬ್ಬನ ಮೇಲೆ ಗುಂಪು ಹಲ್ಲೆ

ಪುತ್ತೂರಿನ ಚಿನ್ನದ ಡೈ ವರ್ಕ್ ನಡೆಸುವ ಅಂಗಡಿಯಲ್ಲಿ ಚಿನ್ನಕ್ಕೆ ತಾಮ್ರ ಕಲಬೆರಕೆ ಮಾಡಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಹೇಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯೂ ಎ .14 ರಂದು ಕೋರ್ಟ್ ರಸ್ತೆಯ ರಾಧಿಕಾ ಪ್ಲಾಜಾದಲ್ಲಿರುವ ಗಾಯತ್ರಿ ಡೈ ವರ್ಕ್ಸ್ ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಡೈ ವರ್ಕ್ಸ್’ನಲ್ಲಿ ಕೆಲಸ ಮಾಡುವ ಬಂಗಾಳ ಮೂಲದ ವ್ಯಕ್ತಿ ಹಲ್ಲೆಗೆ ಒಳಗಾದ ವ್ಯಕ್ತಿ ಎನ್ನಲಾಗುತ್ತಿದೆ. ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ವಂಚನೆಯಾ ಹಲ್ಲೆಯ ಬಗ್ಗೆ ಪ್ರಕರಣ ದಾಖಲಾಗಿಲ್ಲ.
ಮೂಲಗಳ ಪ್ರಕಾರ ಚಿನ್ನದ ಕೆಲಸ ಮಾಡುವ ಅಕ್ಕಸಾಲಿಗರು ಡೈ ವರ್ಕ್ಸ್’ನ ಕೆಲಸದ ಬಾಬ್ತು ಇಲ್ಲಿ ನೀಡುವ ಚಿನ್ನದಲ್ಲಿ ಕಾಪರ್ ಬೆರೆಸಿ ಅಕ್ರಮ ಎಸಗಲಾಗಿದೆ. ಕೆಲಸದ ಬಾಬ್ತು ನೀಡಿದ ಚಿನ್ನವನ್ನುವಾಪಸ್ಸು ಪಡೆದ ಸಂದರ್ಭ, ಚಿನ್ನದ ಕೆಲಸಗಾರರು ಅದನ್ನು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇದೇ ರೀತಿ ಇನ್ನೂ ಹಲವು ಚಿನ್ನದ ಕೆಲಸಗಾರರು ಇಲ್ಲಿ ಚಿನ್ನ ನೀಡಿ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದ್ದು, ಈ ಸುದ್ದಿ ಹಬ್ಬುತ್ತಲೇ ಚಿನ್ನದ ಕೆಲಸಗಾರರು ಸ್ಥಳದಲ್ಲಿ ಜಮಾಯಿಸಿ ಬಂಗಾಳ ಮೂಲದ ಡೈ ವರ್ಕ್ಸ್‌ನ ಕೆಲಸಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ತರಾಟೆಗೆ ತೆಗೆದುಕೊಳ್ಳುವ ಹಾಗೂ ಸ್ಥಳದಲ್ಲಿ ಜನರು ಜಮಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಈ ಸಂದರ್ಭ ಆತನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

Related posts

Leave a Reply

Your email address will not be published. Required fields are marked *