Header Ads
Breaking News

ಚೆಕ್ ಪೋಸ್ಟ್‍ಗಳಲ್ಲಿ ಕೆಲಸ ಮಾಡುವ ಪೊಲೀಸ್ ಕಣ್ಣೀರು

ಕೊರೋನಾ ಲಾಕ್‍ಡೌನ್‍ನ ಹಿನ್ನಲೆಯಲ್ಲಿ ಚೆಕ್ ಪೋಸ್ಟ್‍ಗಳಲ್ಲಿ ಕೆಲಸ ಮಾಡುವ ಪೊಲೀಸರು ಇದೀಗ ಕಣ್ಣೀರು ಹಾಕಲಾರಂಭಿಸಿದ್ದಾರೆ. ತನ್ನ ಮನೆಯವರನ್ನೇ ಕಳೆದು ಕೊಂಡು ಡ್ಯೂಟಿ ಮಾಡುವ ಮಂಗಳೂರಿನ ಎಎಸ್‍ಐ ಡೊಂಬಯ್ಯ ದೇವಾಡಿಗ ಮಾಧ್ಯಮದ ಎದುರು ಕಣ್ಣೀರು ಹಾಕಿದ್ದಾರೆ. ತನ್ನ ಅಣ್ಣನ ಮಗ 33 ವರ್ಷದ ಯುವಕ ಕೊರೋನಾವನ್ನು ನಿರ್ಲಕ್ಷ್ಯ ಮಾಡಿ ಎರಡು ದಿನದ ಹಿಂದೆ ಸಾವನ್ನಪ್ಪಿದ್ದಾನೆ. ಮದುವೆಯಾಗಿ ಎರಡು ತಿಂಗಳಾದ ಯುವಕ ಕೊರೋನಾ ಪಾಸಿಟಿವ್ ಆಗಿ ಒಂದೇ ವಾರದಲ್ಲಿ ಸಾವನ್ನಪ್ಪಿದ್ದಾನೆ. ಕೊರೋನಾ ನಮಗೆ ಬರಲ್ಲ ಎಂದು ಬೇಕಾಬಿಟ್ಟಿ ಓಡಾಡೋ ಯುವಕರನ್ನು ಚೆಕ್‍ಪೋಸ್ಟ್‍ನಲ್ಲಿ ತಡೆದು ತನ್ನ ಕಣ್ಣೀರ ಕಥೆಯನ್ನೇ ಎಎಸ್‍ಐ ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಯುವ ಸಮುದಾಯ ಉಢಾಪೆ ಮನೋವನೆಯನ್ನು ಬಿಟ್ಟು ಬಿಡಬೇಕು, ರಸ್ತೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ರು. ಇನ್ನು ಎಎಸ್‍ಐ ಡೊಂಬಯ್ಯ ದೇವಾಡಿಗ ಮಾತನಾಡಿ, ಕೋವಿಡ್ ಬಗ್ಗೆ ಯುವ ಸಮುದಾಯ ಜಾಗೃತೆ ವಹಿಸಿಕೊಳ್ಳಬೇಕೆಂದು ಮನವಿ ಮಾಡಿಕೊಟ್ಟರು.

Related posts

Leave a Reply

Your email address will not be published. Required fields are marked *