Header Ads
Breaking News

ಜಲಜಕ್ಕ ದಂಪತಿ ಜೀವನದಲ್ಲಿ ಮೂಡಿದ ಹೊಸ ಬೆಳಕು: ಮನೆ ಕಟ್ಟಿಕೊಟ್ಟ ಸತ್ಯದ ತುಳುವೆರ್ ಯುವಕರ ತಂಡ

sathyada tuluver yuvakara thanda

ಇದು ಮಲ್ಪೆ ಪಡುಕೆರೆಯ ಜಲಜಕ್ಕ ದಂಪತಿಗಳ ಮುರುಕಲು ಗುಡಿಸಲು, ಮಳೆ ನೀರು ಸೋರದಂತೆ ಅಲ್ಲಲ್ಲಿ ಟರ್ಪಾಲ್ ಹಾಕಲಾಗಿದೆ. ಅದೂ ಕೂಡ ಹರಿದು ಹೋಗಿದೆ. ಮಲಗೋಕೆ ಮರಳೇ ಹಾಸಿಗೆ , ಇಂದೋ.. ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ಈ ಪುಟ್ಟ ಗುಡಿಸಲು.ಇದೇ ಪಾಳು ಗುಡಿಸಲಿನಲ್ಲಿ ಕಳೆದ ಇಪ್ಪತ್ತು ವರುಷಗಳಿಂದ ಕಡು ಬಡತನದಲ್ಲಿ ಜಲಜಕ್ಕ ದಂಪತಿಗಳು ಬದುಕುತ್ತಿದ್ದರು. ಇದೀಗ ಜಲಜಕ್ಕ ದಂಪತಿಗಳ ಜೀವನದಲ್ಲಿ ಹೊಸ ಬೆಳಕು ಮೂಡಿದೆ. ಸತ್ಯದ ತುಳುವೆರೆ ಯುವಕರ ತಂಡ ಮನೆ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ…

ಜಲಜಕ್ಕನ ಸ್ಥಿತಿಗೆ ಮನಕರಗಿದ ಸತ್ಯದ ತುಳುವೆರ್ ಎನ್ನುವ ಸಂಘಟನೆಯ ಯುವಕರೆಲ್ಲರೂ ಒಟ್ಟಾಗಿ ಜಲಜಕ್ಕನಿಗೆ ಮನೆ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ . ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.ದಾನಿಗಳು ಹಿತೈಶಿಗಳೆಲ್ಲರು ಜೊತೆಯಾಗಿದ್ದಾರೆ .ಯುವಕೆರಲ್ಲರೂ ರಾತ್ರಿ ಹಗಲೆನ್ನದೇ ಜಲಜಕ್ಕನಿಗೊಂದು ಮನೆ ಕಟ್ಟಿಕೊಡಲು ಉತ್ಸಾಹದಿಂದ ಕೆಲಸಕ್ಕಿಳಿದಿದ್ದು , ಕೇವಲ ಎರಡೇ ವಾರದಲ್ಲಿ ಜಲಜಕ್ಕ ದಂಪತಿಗಳಿಗೆ ಸುಂದರವಾದ ಪುಟ್ಟ ಸೂರೊಂದು ಎದ್ದು ನಿಂತಿದೆ .ಕಣ್ಣೀರ ಕಡಲಲ್ಲಿ ಕಳೆಯುತ್ತಿದ್ದ ಜಲಜಕ್ಕನ ಮೊಗದಲ್ಲಿ ಈ ಯುವಕರು ನಗು ತಂದಿದ್ದಾರೆ.

ಪಡುಕೆರೆಯ ಪವನ್ ಎನ್ನುವ ಸ್ಥಳೀಯ ಯುವಕ ಈ ಮಹಾ ಕಾರ್ಯ ಮಾಡಲು ಮೂಲ ಕಾರಣಕರ್ತ.ಹಲವು ವರುಷಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಸ್ಥಳೀಯ ರಾಜಕಾರಣಿಗಳು,ಅಧಿಕಾರಿಗಳಲ್ಲಿ ಅಂಗಲಾಚಿದ್ದರು.ಅದ್ರೆ ವೋಟಿನ ಸಮಯದಲ್ಲಿ ಭರವಸೆ ನೀಡಿ ಮಾಯವಾಗುತ್ತಿದ್ದವರಿಂದ ಯಾವುದೇ ಸಹಾಯ ಸಿಕ್ಕಿರಲಿಲ್ಲ.ಹೀಗಾಗಿ ಪವನ್ ಸತ್ಯದ ತುಳುವೆರ್ ತಂಡದ ಚೀಯರ್ ಬಾಯ್ ಚೇತನ್ ಎನ್ನುವವರನ್ನು ಸಂಪರ್ಕಿಸಿದ್ದರು.ಅದೇ ದಿನ ಗುಡಿಸಲು ನೋಡಲು ಬಂದ ಸತ್ಯದ ತುಳುವೆರ್ ತಂಡ ಮನೆ ನಿರ್ಮಿಸಲು ಮುಂದಾದರು.

ಇನ್ನೇನು ಜಲಜಕ್ಕ ನೂತನ ಮನೆಗೆ ಕಾಲಿಡಲು ಸಿದ್ದರಾಗಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ಕಾರ್ಯವನ್ನು ಮಾಡಿದ ಸತ್ಯದ ತುಳುವೆರ್ ತಂಡಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಡ ಕುಟುಂಬಕ್ಕೆ ಸೂರು ಕಟ್ಟಿಕೊಟ್ಟ ಅತ್ಮ ತೃಪ್ತಿ ನಮಗಿದೆ ಅಂತಾರೆ ಈ ಯುವಕರ ತಂಡ.
ವರದಿ: ಶ್ರೀಜಿತ್ ಉಡುಪಿ

Related posts

Leave a Reply

Your email address will not be published. Required fields are marked *