Header Ads
Breaking News

ಜಿಲ್ಲೆಯ ಅಭಿವೃದ್ಧಿ ಕೆಲಸದ ಬಗ್ಗೆ ಮುಕ್ತವಾಗಿ ಟೀಕೆ ಮಾಡಿ : ಶಾಸಕ ವೇದವ್ಯಾಸ್ ಕಾಮತ್

ಕಾಂಗ್ರೆಸ್ ಪಕ್ಷದವರಿಂದ ಸಲಹೆಗಳನ್ನು ಕೇಳಲು ಭಯಸುತ್ತೇವೆ. ಆದರೆ ಜಿಲ್ಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಟೀಕೆ-ಟಿಪ್ಪಣಿಗಳನ್ನು ಮುಕ್ತವಾಗಿ ಮಾಡಿ. ಆದರೆ ಎಲ್ಲೊ ಒಂದು ಕಡೆ ಸರ್ಕಾರದ ಬಗ್ಗೆ ಟೀಕೆ ಮಾಡುವಾಗ ಬಡವರಿಗೆ ಸಿಗುವಂತಹ ಸೌವಲತ್ತನ್ನು ವಂಚಿತವಾಗದ ರೀತಿಯಲ್ಲಿ ಟೀಕೆ-ಟಿಪ್ಪಣಿಗಳನ್ನು ಕೊಡಬೇಡಿ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ ಒಂದು ವರ್ಷದ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎಲ್ಲಾ ವ್ಯವಸ್ಥೆಗಳು ಅನುಷ್ಟಾನ ಆಗುತ್ತಿದೆ. ಕಳೆದ 60-70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ವೆನ್ಲಾಕ್ ಆಸ್ಪತ್ರೆಗೆ ಏನು ಮಾಡಿದೆ ಮತ್ತು ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರ ಜಿಲ್ಲೆಗೆ ಏನು ಕೊಟ್ಟಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯನ್ನು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕೋವಿಡ್ ಬಂದ ನಂತರ ಸಂಸದರ ನೇತೃತ್ವದಲ್ಲಿ ಸಿಎಸ್‍ಆರ್ ಫಂಡ್‍ಗಳ ಮುಖಾಂತರ ಎಂಆರ್‍ಪಿಎಲ್, ಎಂಸಿಎಫ್, ಬಿಎಸ್‍ಎಫ್, ಕುದುರೆಮುಖ ಕಂಪೆನಿ ಈ ರೀತಿಯ ಕಂಪೆನಿಗಳ ಸಿಎಸ್‍ಆರ್ ಫಂಡ್ ಮೂಲಕ ಸಂಸದರ ನೇತೃತ್ವದಲ್ಲಿ ಅನುದಾನ ದೊರಕಿಸಿಕೊಡುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವೆಲ್ಲದರ ಪರಿಣಾಮ 70 ವೆಂಟಿಲೇಟರ್‍ಗಳು ಇವತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಉಪಯೋಗಕ್ಕೆ ಸಿಗುತ್ತಿದೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ವಿಜಯ್ ಕುಮಾರ್, ಸುಧೀರ್ ಕಣ್ಣೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *