Header Ads
Breaking News

ಜುಲೈ1ರಿಂದ ಸಿಟಿ ಬಸ್ ಸಂಚಾರ ಆರಂಭ: ಖಾಸಗಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಿಟಿ ಬಸ್‌ಗಳು….!

ಮಂಗಳೂರು ನಗರದಲ್ಲಿ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಸಿಟಿ ಬಸ್ ಸಂಚಾರ ಆರಂಭವಾಗಲಿದ್ದು, ಇನ್ನು ಮುಂದೆ ಸಿಟಿ ಬಸ್‌ಗಳು ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆಂಡ್ ರಾವ್ ವೃತ್ತ ರಸ್ತೆಯಲ್ಲಿ ನಿಲ್ಲುವುದಿಲ್ಲ. ಬದಲಾಗಿ ಎಲ್ಲ ಸಿಟಿ ಬಸ್‌ಗಳು ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದು ನಿಲ್ಲಲಿದೆ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸ್ ಮಾಲಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.

ಈ ಹಿಂದೆ ಜಿಲ್ಲೆಯೊಳಗೆ ಹಾಗೂ ಅಂತರ್ ಜಿಲ್ಲೆಗೆ ಪ್ರಯಾಣಿಸುವ ಖಾಸಗಿ ಬಸ್ಸುಗಳು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಟೇಟ್ ಬ್ಯಾಂಕಿನ ಬಸ್ ನಿಲ್ದಾಣದೊಳಗೆ ಅನುಮತಿಸಲಾಗಿತ್ತು. ಆದರೆ, ಸಿಟಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿರಲಿಲ್ಲ. ಈ ಕುರಿತು ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ಮಾತನಾಡಿ, “ಈ ಮೊದಲು ನಗರ ಬಸ್ಸುಗಳನ್ನು ಹ್ಯಾಮಿಲ್ಟನ್ ಮತ್ತು ರಾವ್ ಸರ್ಕಲ್ ರಸ್ತೆ ಬದಿಯಲ್ಲಿರುವ ಬಸ್ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಸಿಟಿ ಬಸ್ಸುಗಳನ್ನು ಬಸ್ ನಿಲ್ದಾಣದೊಳಗೆ ನಿಲ್ಲಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ” ಎಂದಿದ್ದಾರೆ.

 

Related posts

Leave a Reply

Your email address will not be published. Required fields are marked *