Header Ads
Breaking News

ಜೆಸಿಐ ಬಂಟ್ವಾಳದ ಸದಸ್ಯರಿಂದ ಶ್ರಮದಾನ : ಕಳ್ಳಿಗೆಯ ಸತ್ಯಮ್ಮ ಆಚಾರಿ ಮನೆ ಛಾವಣಿ ದುರಸ್ತಿ

ಬಂಟ್ವಾಳ: ಮಳೆ ಬಂದಾಗ ಸೋರುವ ಹೆಂಚಿನ ಛಾವಣಿಯಿಂದ ಆತಂಕದಲ್ಲೇ ದಿನ ದೂಡುತ್ತಿದ್ದ ಕಳ್ಳಿಗೆ ಗ್ರಾಮದ ಸತ್ಯಮ್ಮ ಆಚಾರಿ ಅವರ ಮನೆ ಛಾವಣಿಯನ್ನು ಜೇಸಿಐ ಬಂಟ್ವಾಳದ ಸದಸ್ಯರು ಹಾಗೂ ಸ್ಥಳೀಯ ಯುವಕರು ಶ್ರಮದಾನದ ಮೂಲಕ ದುರಸ್ತಿಗೊಳಿಸಿ ಮಾನವೀಯತೆ ಮರೆದರು.ಕರೋನಾ ಲಾಕ್ಡೌನ್ ಬಿಡುವಿನ ವೇಳೆಯನ್ನು ಬಡ ವೃದ್ದೆಯ ಮನೆ ದುರಸ್ತಿ ಕಾರ್ಯಕ್ಕೆ ಸದ್ವಿನಿಯೋಗಿಸಿಕೊಂಡ ಜೇಸಿ ಸದಸ್ಯರು ಸರಕಾರದ ನಿಯಮಾವಳಿಯಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಛಾವಣಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡರು.ಸತ್ಯಮ್ಮ ಆಚಾರಿಯವರು ತನ್ನ ಮನೆಯಲ್ಲಿ ಏಕಾಂಕಿಯಾಗಿ ವಾಸ ಮಾಡುತ್ತಿದ್ದು ಮನೆಯ ಛಾವಣಿ ಮುರಿದು ಮಳೆ ನೀರೆಲ್ಲಾ ಮನೆಯೊಳಗೆ ತುಂಬಿಕೊಳ್ಳುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಜೇಸಿ ಸದಸ್ಯರು ದಾನಿಗಳ ಆರ್ಥಿಕ ಸಹಕಾರ ಹಾಗೂ ಸ್ಥಳೀಯ ಯುವಕರ ಶ್ರಮದಾನದ ಸಹಕಾರದ ಮೂಲಕ ಮನೆ ಛಾವಣಿ ದುರಸ್ತಿ ಪಡಿಸಿದರು. ಈ ಸಂದರ್ಭ ತಕ್ಷಣ ಸ್ಪಂದಿಸಿ ಮನೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಮರದ ಕೆಲಸಗಾರರನ್ನು ಅಭಿನಂದಿಸಲಾಯಿತು. ಜೇಸಿಐ ಬಂಟ್ವಾಳ ದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಕಾರ್ಯದರ್ಶಿ ರೋಷನ್ ರೈ, ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ, ಸದಸ್ಯ ಗಣೇಶ್ ಕುಲಾಲ್, ಪ್ರಮುಖರಾದ ಮನೋಜ್ ಕನಪಾಡಿ, ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಕಳ್ಳಿಗೆ ಪಂಚಾಯತಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಭೇಟಿ ನೀಡಿದರು.

Related posts

Leave a Reply

Your email address will not be published. Required fields are marked *