Header Ads
Breaking News

ಟಗ್ ಮೇಲೆತ್ತುವ ಕಾರ್ಯಾಚರಣೆ ಸಫಲ : ಓರ್ವನ ಮೃತದೇಹ ಪತ್ತೆ

ಹನ್ನೊಂದು ದಿನಗಳ ಸುಧೀರ್ಘ ಅವಧಿಯ ಬಳಿಕ, ಬದ್ರಿಯ ಹಾಗೂ ಯೋಜಕ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಚರಣೆ ಫಲಪ್ರಧಗೊಂಡರೂ, ನಾಪತ್ತೆಯಾದ ಮೂವರ ಪೈಕಿ ಒರ್ವನ ಶವ ಮಾತ್ರ ಟಗ್ ನೊಳಗೆ ಪತ್ತೆಯಾಗುವ ಮೂಲಕ ಮತ್ತೆ ಟೆಕ್ಷನ್ ಉಳಿದುಕೊಂಡಿದೆ.


ಕಳೆದ ಹದಿನೈದನೇ ತಾರೀಕಿದು ಬೀಸಿದ ಬಾರೀ ಚಂಡಮಾರುತಕ್ಕೆ ಸಿಕ್ಕ ಅಲಯನ್ಸ್ ಟಗ್ ಪಲ್ಟಿಯಾಗಿ ಪಡುಬಿದ್ರಿಯ ಕಡಲ ತೀರದಲ್ಲಿ ಪತ್ತೆಯಾಗಿತ್ತು. ಅದಲ್ಲಿದ್ದ ಎಂಟು ಜನರ ಪೈಕಿ ಮೂವರು ಈಜಿ ದಡ ಸೇರಿದರೆ, ಇಬ್ಬರು ಶವವಾಗಿ ಪತ್ತೆಯಾಗಿದ್ದರು ಉಳಿದ ಮೂರು ಮಂದಿ ಅವಘಢದ ಸಂದರ್ಭ ಟಗ್ ನ ಕ್ಯಾಬಿನ್ ನೊಳಗಿದ್ದರು ಎಂಬ ಮಾಹಿತಿ ಇದ್ದ ಪರಿಣಾಮ ಆ ಕ್ಯಾಬಿನ್ ಒಳಗೆ ಇವರು ಶವವಾಗಿ ಪತ್ತೆಯಾಗ ಬಹುದೆಂಬುದಾಗಿ ಅಂದಾಜಿಸಲಾಗಿತ್ತಾದರೂ ಇದೀಗ ಮಹಾರಾಷ್ಟ್ರದ ರತ್ನಗಿರಿ ಮೂಲದ ಅಶ್ಪಾಕ್ ಆಲಿ ಕಲ್ಪೆ(65), ಇವರ ಶವ ಮಾತ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ಹದಿನೈದನೇ ತಾರೀಕಿದು ಬೀಸಿದ ಬಾರೀ ಚಂಡಮಾರುತಕ್ಕೆ ಸಿಕ್ಕ ಅಲಯನ್ಸ್ ಟಗ್ ಪಲ್ಟಿಯಾಗಿ ಪಡುಬಿದ್ರಿಯ ಕಡಲ ತೀರದಲ್ಲಿ ಪತ್ತೆಯಾಗಿತ್ತು. ಅದಲ್ಲಿದ್ದ ಎಂಟು ಜನರ ಪೈಕಿ ಮೂವರು ಈಜಿ ದಡ ಸೇರಿದರೆ, ಇಬ್ಬರು ಶವವಾಗಿ ಪತ್ತೆಯಾಗಿದ್ದರು ಉಳಿದ ಮೂರು ಮಂದಿ ಅವಘಢದ ಸಂದರ್ಭ ಟಗ್ ನ ಕ್ಯಾಬಿನ್ ನೊಳಗಿದ್ದರು ಎಂಬ ಮಾಹಿತಿ ಇದ್ದ ಪರಿಣಾಮ ಆ ಕ್ಯಾಬಿನ್ ಒಳಗೆ ಇವರು ಶವವಾಗಿ ಪತ್ತೆಯಾಗ ಬಹುದೆಂಬುದಾಗಿ ಅಂದಾಜಿಸಲಾಗಿತ್ತಾದರೂ ಇದೀಗ ಮಹಾರಾಷ್ಟ್ರದ ರತ್ನಗಿರಿ ಮೂಲದ ಅಶ್ಪಾಕ್ ಆಲಿ ಕಲ್ಪೆ(65), ಇವರ ಶವ ಮಾತ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕ್ಯಾಜಿನ್ ಒಳಗೆ ಮರಳು ತುಂಬಿಕೊಂಡಿದ್ದು ಒಂದು ಕಡೆಯಾದರೆ ಒಳಭಾಗ ಖಗ್ಗತ್ತಲು ತುಂಬಿದ್ದರಿಂದ ಶವಗಳ ಹುಡುಕಾಟಕ್ಕೆ ಹಿನ್ನಡೆಯಾಗಿದೆ. ಉಳಿದಿಬ್ಬರಾದ ಕಲ್ಕತ್ತಾ ಮೂಲದ ಮೌನುದ್ಧೀನ್ ಹಕ್ ಎಸ್.ಕೆ., ಹಾಗೂ ಹಿಮಾಚಲ ಪ್ರದೇಶ ಪವನ್ ಚಂದ್ ಕಟೋಚಿ ಇವರೇನಾದರು ಎಂಬುದೇ ಇಲ್ಲಿ ಕಾಡುತ್ತಿರುವ ಪ್ರಶ್ನೆ. ಸಿಕ್ಕ ಒಂದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮನೆಮಂದಿಗಳೊಂದಿಗೆ ಮಣಿಪಾಲಕ್ಕೆ ಸಾಗಿಸಲಾಗಿದ್ದು ಆ ಬಳಿಕ ಹುಟ್ಟೂರಿಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಯಿತು.

 

Related posts

Leave a Reply

Your email address will not be published. Required fields are marked *