Header Ads
Breaking News

ಟಾಸ್ಕ್‍ಪೋರ್ಸ್ ಸಮಿತಿ : ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸಭೆ

ಬಂಟ್ವಾಳ: ಕೋವಿಡ್ ಪ್ರಕರಣಗಳು ಇತ್ತೀಚಿನಗಳಲ್ಲಿ ಹೆಚ್ಚಾಗುತ್ತಿದ್ದು ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಕಾವಳಪಡೂರು ಗ್ರಾ.ಪಂ.ನ ಸಭಾಂಗಣದಲ್ಲಿ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಯಿತು.

ಕೋವಿಡ್‍ನಿಂದ ಪಾರಾಗುವ ಉದ್ದೇಶದಿಂದ ಗ್ರಾಮದ ಪ್ರತಿಯೊಬ್ಬರೂ ವ್ಯಾಕ್ಸಿನೇಷನ್ ಪಡೆಯುವಂತೆ ಅವರು ಮನವಿ ಮಾಡಿದರು.ಹೊರರಾಜ್ಯ ಹೊರಜಿಲ್ಲೆಗಳಿಂದ ಬರುವಂತಹವರ ಬಗ್ಗೆ ನಿಗಾ ಇರಲಿ , ಅವರು ಕೋವಿಡ್ ನಿಯಮ ಗಳನ್ನು ಪಾಲನೆ ಮಾಡುವಂತೆ ಆಶಾಕಾರ್ಯಕರ್ತೆಯರು ಗಮನ ಹರಿಸಬೇಕು ಎಂದು ಅವರು ಹೇಳಿದರು.
ವಗ್ಗದಲ್ಲಿ ಕೋವಿಡ್ ಕೇರ್ ಸೆಂಟರ್ ನ ವ್ಯವಸ್ಥೆ ಮಾಡಲಾಗಿದ್ದು, ಅದರ ಉತ್ತಮ ನಿರ್ವಹಣೆ ಗೆ ಟಾಸ್ಕ್ ಪೊರ್ಸ್ ಸಹಾಯ ಮಾಡಿ ಎಂದು ಮನವಿ ಮಾಡಿದರು.

ಕೋವಿಡ್ ಸೊಂಕನಿಂದ ಮನೆಯಲ್ಲಿ ರುವ ಬಡ ಕುಟುಂಬಗಳಿಗೆ ಶಾಸಕರ ವೈಯಕ್ತಿಕ ನೆಲೆಯಿಂದ ಕಿಟ್ ನೀಡುವ ಕೆಲಸ ಮಾಡಲಾಗುತ್ತಿದೆ.ಇಂತಹ ಸಂದರ್ಭಗಳಲ್ಲಿ ಅನಾವಶ್ಯಕ ಭಯಬೇಡ, ನಿಯಮ ಪಾಲನೆ ಮಾಡುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾ.ಪಂಚಾಯತ್ ಅಧ್ಯಕ್ಷೆ ರಜನಿ, ಉಪಾಧ್ಯಕ್ಷೆ ಲಕ್ಷ್ಮೀ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇಒ.ರಾಜಣ್ಣ, ಪಿಡಿಒ ಶ್ರೀಧರ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು , ಗ್ರಾಮ ಕರಣೀಕೆ ಆಶಾಮೆಹಂದಲೆ, ಹಾಗೂ ಟಾಸ್ಕ್ ಪೊರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *