Header Ads
Breaking News

ಡಾ. ಕಕ್ಕಿಲಾಯ ವಿರುದ್ಧ ಅವಹೇಳನ ಪ್ರಕರಣ : ಠಾಣೆಯಲ್ಲಿ ಕ್ಷಮೆಯಾಚಿಸಿದ ಗುರುದೇವ ಪೈ

ಇತ್ತೀಚಿಗೆ ನಗರದ ಸೂಪರ್ ಮಾರ್ಕೆಟ್ ವೊಂದರ ಮಾಲಕ ಹಾಗೂ ವ್ಯಕ್ತಿಯೊಬ್ಬರ ನಡುವಿನ ಅವಹೇಳನಕಾರಿ ಆಡಿಯೋ ಸಂಭಾಷಣೆ ವೈರಲ್ ಆಗಿದ್ದ ಪ್ರಕರಣದ ಆರೋಪಿ ಗುರುದೇವ್ ಪೈ ಎಂಬಾತ ತಪ್ಪು ಒಪ್ಪಿಕೊಂಡು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ತನ್ನ ಹಾಗು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಹೆಸರು ಉಲ್ಲೇಖಿಸಿ, ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಮತ್ತು ನಮ್ಮ ವಿರುದ್ಧ ಹಿಂಸೆಗೆ ಪ್ರಚೋದಿಸಿದ್ದಾರೆ ಎಂದು ವಿಚಾರವಾದಿ ಪ್ರೊ .ನರೇಂದ್ರ ನಾಯಕ್ ಅವರು ಉರ್ವಾ ಠಾಣೆಯಲ್ಲಿ ಮೇ 21ರಂದು ದೂರು ದಾಖಲಿಸಿದ್ದರು. ಆ ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

ದೂರಿನ ಪರಿಶೀಲನೆ ನಡೆಸಿದ ಪೊಲೀಸರು ಆಡಿಯೋದಲ್ಲಿ ಡಾ.ಕಕ್ಕಿಲ್ಲಾಯ ಹಾಗು ನರೇಂದ್ರ ನಾಯಕ್ ಹೆಸರನ್ನು ಉಲ್ಲೇಖಿಸಿ ಅವಹೇಳನಕಾರಿ ಪದಗಳನ್ನು ಬಳಸಿದ ಹಾಗು ಹಿಂಸೆಗೆ ಪ್ರಚೋದಿಸಿದ ಗುರುದೇವ್ ಪೈ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆಸಿ ನರೇಂದ್ರ ನಾಯಕ್ ಎದುರಿನಲ್ಲಿ ವಿಚಾರಣೆ ನಡೆಸಿದ್ದಾರೆ.Narendra-Nayak

ಆಡಿಯೋ ಸಂಭಾಷಣೆ ಮಾಡಿದ್ದ ಗುರುದೇವ್ ಪೈ ಎಂಬ ಹೆಸರಿನ ಆ ವ್ಯಕ್ತಿ ನರೇಂದ್ರ ನಾಯಕ್ ಎದುರಲ್ಲಿ ತಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ವ್ಯಕ್ತಿಯಿಂದ ಲಿಖಿತ ಹೇಳಿಕೆ ಬರೆಸಿಕೊಂಡು ಮುಂದೆ ಹೀಗಾಗದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿದೆ ಎಂದು ಉರ್ವಾ ಠಾಣೆ ಇನ್‍ಸ್ಪೆಕ್ಟರ್ ತಿಳಿಸಿದ್ದಾರೆ.

 

Related posts

Leave a Reply

Your email address will not be published. Required fields are marked *