ತಲಪಾಡಿ ಗಡಿಯಲ್ಲಿ ಮುಂದುವರಿದ ಪ್ರತಿಭಟನೆ: ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ರದ್ದು

ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರದ ಆದೇಶದ ವಿರುದ್ಧ ತಲಪಾಡಿ ಗಡಿಯಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು ಇಂದು ಕೂಡ ಮಂಜೇಶ್ವರ ಪಂಚಾಯತ್ ಯುಡಿವೈಎಫ್ ಈ ಸಮಿತಿಯ ನೇತೃತ್ವದಲ್ಲಿ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಯಿತು.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ತಲಪಾಡಿ ಗಡಿ ಪ್ರದೇಶಕ್ಕೆ ಭೇಟಿ ನೀಡುವ ಮಾಹಿತಿಯಂತೆ ಕೇರಳ ಭಾಗದಲ್ಲಿ ಪ್ರತಿಭಟನೆ ಸಜ್ಜುಗೊಂಡಿತ್ತು. ಪ್ರತಿಭಟನೆಯ ಮಾಹಿತಿ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಲಪಾಡಿ ಸಂದರ್ಶನವನ್ನು ರದ್ದುಗೊಳಿಸಿದ್ದರು. ತಲಪಾಡಿ ಗಡಿ ತಲುಪಿದ ಯುಡಿವೈಎಫ್ ಕಾರ್ಯಕರ್ತರು ಇಂದು ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿ, ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡವರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕ ಪ್ರವೇಶಿಸಲು ಅನುಮತಿ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

ಪ್ರತಿಭಟನೆಯಲ್ಲಿ ಹರ್ಷಾದ್ ವರ್ಕಾಡಿ, ಸೈಫುಲ್ಲಾ ತಂಙಳ್, ಸಿದ್ದೀಕ್ ಮಂಜೇಶ್ವರ, ಮುಸ್ತಫಾ ಉದ್ಯಾವರ, ಇಲ್ಯಾಸ್ ಕುಂಜತ್ತೂರು ಅಬ್ದುಲ್ಲತೀಫ್ ಬಾಬ, ಪುತ್ತುಚ್ಙ, ಮುಬಾರಕ್ ಗುಡ್ಡೆಕೇರಿ, ರಿಯಾಜ್ ಮುಂತಾದವರು ನೇತೃತ್ವ ನೀಡಿದರು.

 

Related Posts

Leave a Reply

Your email address will not be published.