Header Ads
Breaking News

ತೀವ್ರ ಗಾಳಿ ಮಳೆಯ ಪರಿಣಾಮ ಛಾವಣಿ : ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರಿಂದ ದುರಸ್ತಿ

ವಿಟ್ಲ: ತೀವ್ರ ಗಾಳಿ ಮಳೆಯ ಪರಿಣಾಮ ಛಾವಣಿ ಕುಸಿತಕ್ಕೊಳಗಾದ ಮನೆಯನ್ನು ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ದುರಸ್ತಿಗೊಳಿಸಿ ಹಸ್ತಾಂತರ ಮಾಡಿದ್ದಾರೆ. ಪೆರುವಾಯಿ ಮುಚ್ಚಿರಬೆಟ್ಟು ನಿವಾಸಿ ಸಂಜೀವ ಮೊಗೇರ ಅವರ ಮನೆಯ ಛಾವಣಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗಾಳಿಗೆ ಕುಸಿದು ಬಿದ್ದಿತ್ತು. ಇದರಿಂದ ಮನೆಮಂದಿ ಮಳೆಯ ನಡುವೆಯೂ ಜೀವನ ನಡೆಸಬೇಕಾಗಿತ್ತು. ಒಂದು ವರ್ಷದಿಂದ ಈ ಮನೆಯೂ ಶಿಥಿಲಗೊಂಡಿತ್ತು. ಮೊನ್ನೆ ಸುರಿದ ಮಳೆಗೆ ಸಂಪೂರ್ಣವಾಗಿ ಹಾನಿಗೊಂಡಿತ್ತು. ಕೂಲಿ ಕೆಲಸ ಮಾಡಿ ದಿನದೂಡುತ್ತಿರುವ ಸಂಜೀವ ಅವರಿಗೆ ಮನೆ ದುರಸ್ತಿ ಮಾಡುವಷ್ಟು ಶಕ್ತಿ ಇಲ್ಲ. ಈ ಬಗ್ಗೆ ಹಲವರಲ್ಲಿ ಅಂಗಾಲಾಚಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಈ ಕುಟುಂಬ ಭಾರೀ ನೊಂದಿತ್ತು. 
ಈ ಬಗ್ಗೆ ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರ ಗಮನಕ್ಕೆ ಬಂದಿದೆ. ಅವರು ತಕ್ಷಣವೇ ದುರಸ್ತಿ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕೇವಳ ನಾಲ್ಕೇ ದಿನದಲ್ಲಿ ಮನೆಯ ದುರಸ್ತಿ ಕಾರ್ಯ ನಡೆಸಿಕೊಟ್ಟಿದ್ದಾರೆ. ಈ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇರಲಿಲ್ಲ. ಇದೀಗ ಅದನ್ನು ಕೂಡಾ ಮಾಡಿಕೊಟ್ಟಿದ್ದು, ಗುಡಿಸಲಿನಂತಿದ್ದ ಮನೆಯನ್ನು ಸುಸಜ್ಜಿತವಾಗಿ ದುರಸ್ತಿ ಮಾಡಿದ್ದಾರೆ. ಸುಮಾರು 75 ಸಾವಿರ ರೂ. ವೆಚ್ಚದಲ್ಲಿ ಮನೆ ಪುನರ್ ನಿರ್ಮಾಣಗೊಂಡಿದ್ದು, ಇದೀಗ ಈ ಕುಟುಂಬ ನೆಮ್ಮಂದಿಯಿಂದ ಜೀವನ ನಡೆಸುವಂತಾಗಿದೆ.

Related posts

Leave a Reply

Your email address will not be published. Required fields are marked *