Header Ads
Breaking News

ತುಳು ಚಿತ್ರದ ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ

ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರು ಮಾಡಿದ್ದ ರಘು ಶೆಟ್ಟಿ (39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಘು ಶೆಟ್ಟಿ ಮೂಲತಃ ಮೂಡುಬಿದ್ರೆಯವರು. ಯುವಕನಾಗಿದ್ದಾಗಲೇ ಫಿಲ್ಮ್ ಬಗ್ಗೆ ಆಸಕ್ತಿ ಹೊಂದಿದ್ದಲ್ಲದೆ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಸ್ವಂತ ನಿರ್ದೇಶನದಲ್ಲಿ ಮೊದಲಿಗೆ ಅರ್ಜುನ್ ವೆಡ್ಸ್ ಅಮೃತಾ’ ತುಳು ಚಿತ್ರವನ್ನು ತಯಾರಿಸಿದ್ದರು. ಫ್ಯಾಮಿಲಿ ಹಿಟ್ ಸಿನಿಮಾವಾಗಿ ಗಮನ ಸೆಳೆದಿದ್ದ ಅರ್ಜುನ್ ವೆಡ್ಸ್ ಅಮೃತಾ ಸಿನಿಮಾದ ನಿರ್ದೇಶನಕ್ಕಾಗಿ ರಘು ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಲಭಿಸಿತ್ತು. ಮೃತರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Related posts

Leave a Reply

Your email address will not be published. Required fields are marked *