Header Ads
Breaking News

ತೃಣಮೂಲ ಕಾಂಗ್ರೆಸ್‍ನಿಂದ ಪರಿಶಿಷ್ಟ ಜಾತಿ ಬಗ್ಗೆ ಅಪಮಾನ : ಚುನಾವಣಾಧಿಕಾರಿಗೆ ಮನವಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪರಿಶಿಷ್ಟ ಜಾತಿಗಳನ್ನು ಕುರಿತು ಅಪಮಾನಕರ ಹೇಳಿಕೆಯನ್ನು ಖಂಡಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡ ಬಿಜೆಪಿ ಎಸ್ಸಿ ಮೋರ್ಚಾ ದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು.

ದಕ್ಷಿಣ ಕನ್ನಡ ಬಿಜೆಪಿ ಎಸ್ಸಿ ಮೋರ್ಚಾದ ನಿಯೋಗ ಚುನಾವಣಾಧಿಕಾರಿ ಶಿವರಾಮ್ ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ವಿನಯನೇತ್ರ ದಡ್ಡಲ್‍ಕಾಡ್ ಅವರು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕಿಯೊಬ್ಬರು ಪರಿಶಿಷ್ಠ ಜಾತಿಯವರು ನೈಜವಾಗಿಯೇ ಬೇಡುವ ಭಿಕ್ಷುಕರು ಎಂಬ ಹೇಳಿಕೆಯನ್ನು ನೀಡುವ ಮೂಲಕ ಪರಿಶಿಷ್ಠ ಜಾತಿಯ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಅವಮಾನಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ನಿಯೋಗದಲ್ಲಿ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮನೋಜ್ ಕುಮಾರ್, ರಾಜ್ಯ ಸಮಿತಿಯ ಸದಸ್ಯರಾದ ದಿನೇಶ್ ಅಮ್ಟೂರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *