Header Ads
Breaking News

ತೆಂಕಮಿಜಾರು ಗ್ರಾ.ಪಂ.ನ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ

ಮೂಡುಬಿದಿರೆ: ಕಳೆದ ಮೂರು ವರ್ಷಗಳಿಂದ ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಒಂಬುಡ್ಸ್‍ಮನ್‍ಗೆ ಹಾಗೂ ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ನರೇಗಾ ಯೋಜನೆಯ ಒಂಬುಡ್ಸ್ ಮನ್ ಪಂಚಾಯಿತಿ ಕಚೇರಿಗೆ ಬಂದು ಕಡತಗಳನ್ನು ಪರಿಶೀಲಿಸಿ, ಸ್ಥಳ ತನಿಖೆ ಮಾಡಿದ್ದಾರೆ.ಬಡಗ ಮಿಜಾರು ಗ್ರಾಮದ ಪಿದಮಲೆಯಲ್ಲಿ ನರೇಗಾ ಯೋಜನೆಯ ಕೆಲಸಗಳಲ್ಲಿ ಕೆಲಸ ಮಾಡದೆ ಹಣ ತೆಗೆದಿರುವುದು, ಪಂಚಾಯಿತಿ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟು ಕಳಪೆಯಾಗಿರುವುದು, ಅಭಿಯಂತರರು ಅಳತೆ ಮಾಪನ ಪುಸ್ತಕದಲ್ಲಿ ಹೆಚ್ಚು ಮೊತ್ತವನ್ನು ನಮೋದಿಸಿ ಸುಮಾರು 30,000 ಹಣವನ್ನು ತೆಗೆದು ದುರ್ಬಳಕೆ ಮಾಡಿರುವುದು. ಪಿದಮಲೆಯಲ್ಲಿ ಒಂದೇ ತೋಡಿಗೆ ಹಲವು ಹೆಸರುಗಳನ್ನು ನೀಡಿ, ತೋಡು ಹೋಳೆತ್ತುವ ಹಾಗೂ ಪ್ರವಾಹ ನಿಯಂತ್ರಣ ತಡೆಗೋಡೆ ನೆಪದಲ್ಲಿ ಲಕ್ಷಾಂತರ ರೂ. ಅವ್ಯವಹಾರವಾಗಿರುವ ಬಗ್ಗೆ ದೂರು ನೀಡಲಾಗಿತ್ತು.ತನಿಖಾ ವರದಿಯನ್ನು 10 ದಿನಗಳ ಒಳಗೆ ಸಿದ್ದಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು. ಇನ್ನುಳಿದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಸ್ಥಳ ತನಿಖೆ, ಮಹಜರು ನಡೆಸುವುದಾಗಿ ಒಂಬುಡ್ಸ್‍ಮನ್ ರಾಮದಾಸ್ ಗೌಡ ಅವರು ಪಂಚಾಯಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *