Header Ads
Breaking News

ತೊಕ್ಕೊಟ್ಟು: ಆಟೋ ಸ್ಪೇರ್ ಪಾರ್ಟ್ಸ್ ಅಂಗಡಿ ಬೆಂಕಿಗಾಹುತಿ

ತೊಕ್ಕೊಟ್ಟು: ಮಂಗಳೂರಿನ ತೊಕ್ಜೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೊರಗಜ್ಜನ ಗುಡಿ ಸಮೀಪದ ವಾಣಿಜ್ಯ ಕಟ್ಟಡದ ಅಂಗಡಿಯೊಂದರಲ್ಲಿ ಇಂದು ಬೆಳಿಗ್ಗೆ ಅಗ್ನಿ ಆಕಸ್ಮಿಕ ಅವಘಡ ಸಂಭವಿಸಿದೆ.

ಓವರ್ ಬ್ರಿಡ್ಜ್ ಬಳಿಯಿರುವ ಗೋಲ್ಡನ್ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿ ಅವಘಢ ಸಂಭವಿಸಿದೆ. ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. 

ಬೆಳಿಗ್ಗೆ 10.00 ಗಂಟೆಯ ವೇಳೆಗೆ ಈ ಅಗ್ನಿ ಅವಘಡ ಸಂಭವಿಸಿದೆ . ತಕ್ಷಣವೇ ಸ್ಥಳೀಯರು ಖಾಸಗಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸರಬಹುದೆಂದು ಹೇಳಲಾಗಿದೆ.


ಅಗ್ನಿ ಅವಗಡ ಸಂಭವಿಸದ ವೇಳೆ ಲಾಕ್ ಡೌನ್ ನ್ನು ಮರೆತು ಸಾವಿರಾರು ಜನ ರಸ್ತೆಯ ಇಕ್ಕೆಲಗಳಲ್ಲೂ ನಿಂತು ಅಗ್ನಿ ನಂದಿಸುವ ಕಾರ್ಯಚರಣೆಯನ್ನು ವೀಕ್ಷಣೆ ಮಾಡುತ್ತಿರುವುದು ಕಂಡು ಬಂತು. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ನಿಯಂತ್ರಿಸಿದರು.ಬೆಂಕಿ ಅಂಗಡಿಗೆ ಸಂಪೂರ್ಣ ವ್ಯಾಪಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Related posts

Leave a Reply

Your email address will not be published. Required fields are marked *