Header Ads
Breaking News

ತೌಕ್ತೆ ಚಂಡಮಾರುತದಿಂದ ಭಾರೀ ಮಳೆ : ಎನ್.ಡಿ.ಆರ್.ಎಫ್ ತಂಡ ಸಜ್ಜು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ತೌಕ್ತೇ ಚಂಡಮಾರುತದಿಂದ ಕರಾವಳಿಯಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ದಿನವಿಡೀ ಮಳೆ ಸುರಿಯುತ್ತಿದೆ. ಕರಾವಳಿಯಲ್ಲಿ ಮೇ 16 ರವರೆಗೆ ರೆಡ್ ಅಲರ್ಟ್ ,17 -18 ರಂದು ಅರೆಂಜ್ ಅಲರ್ಟ್ ಘೋಷಿಸಲಾಗಿದೆ.ಕರಾವಳಿ ಭಾಗದ ಕೆಲವೆಡೆ ನಿನ್ನೆ ರಾತ್ರಿಯೇ ಮಳೆ ಪ್ರಾರಂಭವಾಗಿದ್ದು , ಇದು ಇಂದು ಕೂಡಾ ಮುಂದುವರೆದಿದೆ. ಮಳೆಯ ಜೊತೆ ಗಾಳಿ ಕೂಡ ಇದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಉದ್ದೇಶದಿಂದ ಜಿಲ್ಲೆಗೆ ಎನ್.ಡಿ.ಆರ್.ಎಫ್ ತಂಡ ಆಗಮಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಎನ್‍ಡಿಆರ್‍ಎಫ್ ತಂಡವನ್ನು ಸನ್ನದ್ದಗೊಳಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ.

 

Related posts

Leave a Reply

Your email address will not be published. Required fields are marked *