Header Ads
Breaking News

ದ.ಕ. ಜಿಲ್ಲೆಯಲ್ಲಿ ಚಂಡಮಾರುತದಿಂದ 126 ಕೋಟಿ ರೂ ನಷ್ಟ : ಸಚಿವರಿಂದ ಸಿಎಂ ಬಿಎಸ್‍ವೈಗೆ ಮನವಿ

ದ.ಕ. ಜಿಲ್ಲೆಯಲ್ಲಿ ಚಂಡ ಮಾರುತದಿಂದ ಸುಮಾರು ಅಂದಾಜು 126 ಕೋಟಿ ರೂ. ನಷ್ಟವಾಗಿದ್ದು, ಪ್ರಕೃತಿ ವಿಕೋಪ ನಿಧಿಯಿಂದ 100 ಕೋಟಿ ರೂ.ಗಳ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ. 

ಚಂಡ ಮಾರುತದ ಪರಿಣಾಮ ದ.ಕ. ಜಿಲ್ಲೆಯ ಲೋಕೋಪಯೋಗಿ ರಸ್ತೆಗಳು ವತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ರಸ್ತೆಗಳು ಹಾಗೂ ಮೀನುಗಾರಿಕಾ ರಸ್ತೆಗಳು ಕೊಚ್ಚಿ ಹೋಗಿವೆ. ಇದರಿಂದಾಗಿ ಲೋಕೋಪಯೋಗಿ ಇಲಾಖೆಯಿಂದ 48 ಕೋಟಿ ರೂ., ಮೀನುಗಾರಿಕಾ ಇಲಾಖೆಯಿಂದ 30 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 18 ಕೋಟಿ ರೂ., ಸಮುದ್ರ ಕೊರತೆದದಿಂದ 30 ಕೋಟಿರೂ. ನಷ್ಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಕೊರೋನ ವಾರಿಯರ್ಸ್ ಎಂದು ಗುರುತಿಸಿ ಪ್ರಥಮ ಹಂತದ ಕೊರೋನ ಲಸಿಕೆ ನೀಡುಂತೆಯೂ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಎಸ್. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *