Header Ads
Breaking News

ದ.ಕ.ಜಿಲ್ಲೆಯಲ್ಲಿ ಬೇಕಾಗುವಷ್ಟು ಆಕ್ಸಿಜನ್ ಲಭ್ಯತೆ ಇದೆ- ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸ್ಪಷ್ಟನೆ

District Collector Dr. Rajendra

ದ.ಕ.ಜಿಲ್ಲೆಯಲ್ಲಿ ಸದ್ಯಕ್ಕೆ ಬೇಕಾಗುವಷ್ಟು ಆಕ್ಸಿಜನ್ ಲಭ್ಯತೆ ಇದ್ದು, ತಕ್ಷಣಕ್ಕೆ ಯಾವುದೇ ಕೊರತೆ ಇಲ್ಲ. ಇನ್ನಷ್ಟು ಆಕ್ಸಿಜನ್ ಸಿಲಿಂಡರ್‍ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.

ದ.ಕ. ಜಿಲ್ಲೆಯ ಎಂಟು ಖಾಸಗಿ ಆಸ್ಪತ್ರೆಗಳ ಪ್ಲಾಂಟ್‍ಗಳಲ್ಲಿ ಆಕ್ಸಿಜನ್ ದಾಸ್ತಾನು ಇದೆ. ಇದಲ್ಲದೆ ಮಂಗಳೂರು ನಗರದಲ್ಲಿ ಮೂರು ರೀಫಿಲ್ಲಿಂಗ್ ಘಟಕಗಳಲ್ಲಿ 10 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿವೆ. ಮಾತ್ರವಲ್ಲ ಪ್ರತಿ ವಾರ 20 ಟನ್ ಆಕ್ಸಿಜನ್ ಹೊರ ಜಿಲ್ಲೆಗಳಿಂದ ತರಿಸುತ್ತಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಲಭ್ಯವಿದೆ ಎಂದು ಡಾ. ರಾಜೇಂದ್ರ ತಿಳಿಸಿದ್ದಾರೆ. ಇನ್ನೂ 800 ಜಂಬೋ ಸಿಲಿಂಡರ್ ಆಕ್ಸಿಜನ್ ಲಿಕ್ವಿಡ್ ಕೇರಳದಿಂದ ಪೂರೈಕೆಯಾಗಲಿದೆ. ಅಲ್ಲದೆ ಬಳ್ಳಾರಿಯ ಜಿಂದಾಲ್ ಪ್ಲಾಂಟ್‍ನಿಂದಲೂ ಆಕ್ಸಿಜನ್ ತರಿಸಲಾಗುತ್ತಿದೆ. ತಕ್ಷಣಕ್ಕೆ 24 ಗಂಟೆಯ ಹೊರತೂ ಬೇಕಾಗುವಷ್ಟು ಆಕ್ಸಿಜನ್ ಸಿಲಿಂಡರ್ ಇಲ್ಲಿ ಲಭ್ಯವಿದೆ ಎಂದು ಡಾ. ರಾಜೇಂದ್ರ ಸ್ಪಷ್ಟಪಡಿಸಿದರು.

Related posts

Leave a Reply

Your email address will not be published. Required fields are marked *