Header Ads
Breaking News

ದ.ಕ. ಜಿಲ್ಲೆಯ ಎನ್‍ಜಿಒ ಸಂಸ್ಥೆಗಳೊಂದಿಗೆ ಸಂವಾದ

ದಕ್ಷಿಣ ಕನ್ನಡ ಜಿಲ್ಲೆಯ ಎನ್‍ಜಿಒ ಸಂಸ್ಥೆಗಳೊಂದಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದ ಮಂಗಳೂರು ಸಿಟಿ ಪೊಲೀಸ್ ತಂಡ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಸ್ತ್ರತ ಚರ್ಚೆ ನಡೆಸಿದರು. ವಿವಿಧ ಕ್ಷೇತ್ರದ ಸಾಧಕರು ಹಾಗೂ ಸಂಘಟಕರೊಂದಿಗೆ ಚರ್ಚೆ ನಡೆಸಿ ಕೋವಿಡ್ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ಸಹಕಾರ ನೀಡಬೇಕೆಂದು ಪೊಲೀಸ್ ಕಮಿಷನರ್ ಮನವಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗ ಅರಸಿ ದೂರದ ದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳ ಕುಟುಂಬದವರ ಆರೋಗ್ಯದ ಬಗ್ಗೆ, ಅವರಿಗೂ ಕ್ಲಪ್ತ ಸಮಯದಲ್ಲಿ ವೈದ್ಯಕೀಯ ಮತ್ತು ಇತರ ತುರ್ತು ನೆರವು ನೀಡುವ ಕುರಿತು ನಮ್ಮ ಕಾಳಜಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿ ಖಂಡಿತವಾಗಿಯೂ ಎಲ್ಲಾ ರೀತಿಯ ನೆರವು ನೀಡಲು ಇಲಾಖೆ ಮತ್ತು ಸ್ವಯಂ ಸೇವಕ ಸಂಸ್ಥೆಗಳ ಮೂಲಕ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು. ಸಂವಾದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಯತೀಶ್ ಬೈಕಂಪಾಡಿ, ಆರ್.ಜೆ. ಎರೋಲ್ ಸೇರಿದಂತೆ ಮತ್ತಿತರು ಭಾಗಿಯಾಗಿದ್ದರು.

Related posts

Leave a Reply

Your email address will not be published. Required fields are marked *