Header Ads
Breaking News

ದ.ಕ. ಮತ್ತು ಉಡುಪಿಯಲ್ಲಿ ಮನೆ ಮನೆ ಪ್ರತಿಭಟನೆ ಯಶಸ್ವಿ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ)ಮತ್ತು ಇತರ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ರಾಜ್ಯಾದಾದ್ಯಂತ ಮನೆ ಮನೆ ಪ್ರತಿಭಟನೆ ನಡೆಸಲು ಕರೆ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಮನೆ ಪ್ರತಿಭಟನೆ ಅತ್ಯಂತ ಯಶಸ್ವಿಯಾಗಿದೆ.

ಮಂಗಳೂರು ನಗರ, ಉಳ್ಳಾಲ, ಗುರುಪುರ, ಮೂಡಬಿದ್ರಿ, ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ನೂರಾರು ಕಡೆ ಪ್ರತಿ ಭಟನೆ ನಡೆದಿದೆ ಎಂದು ಫೆಡರೇಶನ್ ನಾ ಜಿಲ್ಲಾಧ್ಯಕ್ಷರಾದ ವಸಂತ ಆಚಾರೀಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸಲು ಮೇ10ರಿಂದ 24ರವರೆಗೆಲಾಕ್ ಡೌನ್ ಘೋಷಿಸಲಾಗಿದೆ.ಇದರಿಂದಾಗಿ ಕಟ್ಟಡ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಅವರಿಗೆ ಕೆಲಸ ಮಾಡಬಹುದೆಂಬ ನಿರ್ಧೆಶನಗಳಿದ್ದರೂ ಓಡಾಟ ಮಾಡಲು ವಾಹನದ ಸೌಕರ್ಯಗಳಿಲ್ಲದೆ ಕಂಗಾಲಾಗಿದ್ದಾರೆ. ಇದರಿಂದಾಗಿ ಕೆಲಸವಿಲ್ಲದೆ ಅವರು ಮನೆಮಂದಿಯೆಲ್ಲಾ ಉಪವಾಸವಿದ್ದು ಸ್ಥಿತಿ ಬಂದಿದೆ. ಫೆಡರೇಶನ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ನೀಡಿ ಕಲ್ಯಾಣ ಮಂಡಳಿಯಿಂದ ನೀಡಬೇಕಾದ ಆರ್ಥಿಕ ಮೊತ್ತದ ಬಗ್ಗೆ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದರೂ ಸರ್ಕಾರವು ದಿವ್ಯ ಮೌನವಹಿಸಿದ್ದು ಆತಂಕಕಾರಿ ಬೆಳವಣಿಗೆಗೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಕೂಡಾ ನಿರ್ಮಾಣ ವಲಯದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉಚಿತ ಲಸಿಕೆಯನ್ನು ಒಂದು ಕಾಲ ಮಿತಿಯಲ್ಲಿ ಹಾಕಲು ಕ್ರಮವಹಿಸಬೇಕು. 6.ಕೋವಿಡ್ 19ರ ಸೋಂಕಿನಿಂದ ಮ್ರತಪಟ್ಟ ನೋಂದಾಯಿಸಿದ ಪ್ರತಿ ಕಟ್ಟಡ ಕಾರ್ಮಿಕ ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಪ ಪಕ್ಷ 10ಲಕ್ಷ ರೂಪಾಯಿಗಳ ವಿಶೇಷ ಪರಿಹಾರ ಧನವನ್ನು ಪ್ರಕಟಿಸಬೇಕೆಂದು ಪ್ರತಿಭಟನೆ ನಡೆಸಿದರು.

Related posts

Leave a Reply

Your email address will not be published. Required fields are marked *