Header Ads
Breaking News

ಧರ್ಮಸ್ಥಳ ಗೊಳಿತೊಟ್ಟು ಸುಳ್ಯ ರಸ್ತೆಗೆ ಮುಕ್ತಿ ಸಿಗದೆ ಹೋದ್ರೆ ಹೋರಾಟ

ಬೆಳ್ತಂಗಡಿ ತಾಲೂಕು ಹಾಗೂ ಪುತ್ತೂರು, ಕಡಬ, ಮಂಗಳೂರು ಸಂಪರ್ಕಿಸುವ ಕೊಕ್ಕಡ ಗೊಳಿತೊಟ್ಟು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಡೆದು ಕೊಂಡು ಹೋಗಲು ಕೂಡ ತೀರ ಕಷ್ಟಕರವಾಗಿದೆ. ಕೊಕ್ಕಡದಲ್ಲಿ ಸರಕಾರಿ ಸಮುದಾಯ ಆಸ್ಪತ್ರೆ ಇದ್ದು ಅದೇ ರಸ್ತೆಯಲ್ಲೇ ಆಂಬುಲೆನ್ಸ್ ಕೂಡ ಹೋಗಬೇಕು. ಆದರೆ ಮಂಗಳೂರು ತಲುಪುವ ಹೊತ್ತಿಗೆ ರೋಗಿಗಳು ಬದುಕುವುದೇ ಕಷ್ಟ.   ಅಲ್ಲಿನ ಜನ ಪ್ರತಿನಿಧಿಗಳು ಚುನಾವಣೆ ಬಂದಾಗ ಭರವಸೆ ಕೊಟ್ಟು ಓಟು ಗಿಟ್ಟಿಸಿ ಕೊಳ್ಳುತ್ತಾರೆ ನಂತರ ಆ ರಸ್ತೆ ಯಾವುದು ಅಂತಾನೆ ನೆನಪು ಇರುವುದಿಲ್ಲ. ಹಲವಾರು ಬಾರಿ ಶಾಸಕರಿಗೆ ಸಚಿವರಿಗೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲದೆ ಈ ರಸ್ತೆ ಮೇಲ್ದರ್ಜೆಗೆ ಏರಿಸಲಾಗಿದೆ.ಇದಕ್ಕೂ ಮುಂಚೆ ಅಲ್ಲಿನ ಸ್ಥಳೀಯರು ತನ್ನದೇ ಸ್ವಂತ ಕರ್ಚಿಂದ ರಸ್ತೆ ರಿಪೇರಿ ಮಾಡಿದ್ದಾರೆ .ಈಗ ಅಲ್ಲಿನ ಸಾರ್ವಜನಿಕರು ಆಕ್ರೋಶ ಗೊಂಡಿದ್ದು ಸದ್ಯದಲ್ಲೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ

Related posts

Leave a Reply

Your email address will not be published. Required fields are marked *