Header Ads
Breaking News

ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ

ಚಲನಚಿತ್ರದ ಹಾಸ್ಯ ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.ಅವರಿಗೆ 63 ವಯಸ್ಸಾಗಿತ್ತು. ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲಿ ನಟಿಸಿದರು.ಇವರು ರಾಜ್ಯೋತ್ಸವ ಪ್ರಶಸ್ತಿಯನ್ನ ಪಡೆದಿದ್ದಾರೆ. ಪತಿ ವಿನ್ಸೆಂಟ್, ಮಕ್ಕಳಾದ ಪ್ರತಾಪ್ ಮತ್ತು ಬಬಿತಾರನ್ನು ಅಗಲಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರದ ಕಲಾವಿದರು ಕಂಬನಿ ಮಿಡಿದಿದ್ದಾರೆ.

Related posts

Leave a Reply

Your email address will not be published. Required fields are marked *