Header Ads
Breaking News

ನರಿಂಗಾನದಲ್ಲಿ ರಿಕ್ಷಾ ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ

ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ತೌಡು ಗೋಳಿ ಕ್ರಾಸ್ ಬಳಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ಆಟೋ ರಿಕ್ಷಾ ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಆಟೋ ರಿಕ್ಷಾ ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸಗೈದರು. ನಂತರ ಮಾತನಾಡಿದ ಅವರು ಶಾಸಕ ಯು.ಟಿ ಖಾದರ್ ಅವರು ಈಗಾಗಲೇ ಕ್ಷೇತ್ರದಾದ್ಯಂತ ನಗರ ಹಳ್ಳಿ ಹಳ್ಳಿ , ಕುಗ್ರಾಮಕ್ಕೂ ರಸ್ತೆ ನಿರ್ಮಾಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರಂಗಕ್ಕೂ ದೊಡ್ಡ ಮೊತ್ತದ ಅನುದಾನ ನೀಡಿದ್ದಾರೆ. ಶಾಸಕರ ಅವಿರತ ಪ್ರಯತ್ನದಿಂದಲೇ ಉಳ್ಳಾಲ ತಾಲೂಕಾಗಿ ಮಾರ್ಪಟ್ಟಿದೆ. ಆ ಮೂಲಕ ನರಿಂಗಾನ ಗ್ರಾಮಕ್ಕೂ ತಾಲೂಕು ಮಟ್ಟದ ಇಲಾಖೆಗಳು ಬರುವ ನಿರೀಕ್ಷೆ ಇದ್ದು ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬುಸಿದ್ದೀಕ್ ಪಾರೆ ಮಾತನಾಡಿ ನರಿಂಗಾನದಂತಹ ಅತೀ ಹಿಂದುಳಿದಿದ್ದ ಕುಗ್ರಾಮವು ಇಂದು ಸರ್ವತೋಮುಖ ಅಭಿವೃದ್ಧಿ ಕಂಡಿದ್ದು ಅದರ ಸಂಪೂರ್ಣ ಕೀರ್ತಿ ಶಾಸಕ ಯು.ಟಿ. ಖಾದರ್ ಗೆ ಸಲ್ಲತಕ್ಕದ್ದೆಂದು ಹೇಳಿದರು.

ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಜೆ. ಶೆಟ್ಟಿ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ,ಅಸಂಘಟಿತ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಅಬ್ಬಾಸ್ ಹಾಜಿ, ಮುಡಿಪು ಬ್ಲಾಕ್ ಅಧ್ಯಕ್ಷ ಮುರಲೀಧರ ಶೆಟ್ಟಿ ಮೋರ್ಲ, ಮುಡಿಪು ಬ್ಲಾಕ್ ಸೇವಾ ದಳ ಅಧ್ಯಕ್ಷ ಸಮೀರ್ ಪಜೀರು, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪದ್ಮನಾಭ ನರಿಂಗಾನ, ಕಾಂಗ್ರೆಸ್ ನ ಹಿರಿಯ ಮುಖಂಡ ಚಂದ್ರಹಾಸ್ ಶೆಟ್ಟಿ ಮೋರ್ಲ, ವಲಯ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಚಂದುಹಿತ್ಲು, ಸಿದ್ದಿಕ್ ಪಾರೆ, ಸದಸ್ಯರುಗಳಾದ ಸಲೀಂ ಪೊಟ್ಟೊಳಿಕೆ, ಮಲ್ಲಿಕಾ ಗಟ್ಟಿ ಪೊಟ್ಟೊಳಿಕೆ, ತಾಹಿರಾ ಪೊಟ್ಟೊಳಿಕೆ, ಸುಂದರ ಪೂಜಾರಿ ಕೋಡಿಮಜಲು, ಲತೀಫ್ ಕಾಪಿಕಾಡ್, ಗಿರಿಜಾ ಪೊಟ್ಟೊಳಿಕೆ, ಅಬ್ದುಲ್ ರಹಿಮಾನ್ ಚಂದುಹಿತ್ಲು, ಫಯಾಜ್ ಮೊಂಟೆಪದವು, ಗಿರಿಜಾ ಪೊಟ್ಟೊಳಿಕೆ, ಶಾಂತಿ ಡಿಸೋಜ, ಜ್ಯೋತಿ ಡಿಸೋಜ, ಸುನಿತಾ ಡಿಸೋಜ, ಶೇಖಬ್ಬ ನಿಡಾಡ್, ಸಾಬಿರಾ ಪೊಟ್ಟೊಳಿಕೆ, ಜಯಂತಿ ಕಲ್ಲರಕೋಡಿ ಹಾಗೂ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಘಟಕದ ಉಪಾಧ್ಯಕ್ಷ ಅಬ್ಸಾಲಿ ಸೇರಿದಂತೆ ಆಟೋ ಚಾಲಕರು ಮಾಲಕರು ಪಾಲ್ಗೊಂಡಿದ್ದರು.

 

Related posts

Leave a Reply

Your email address will not be published. Required fields are marked *