Header Ads
Breaking News

ನಾಡ ಗ್ರಾ.ಪಂ. ನಲ್ಲಿ ಕೋವಿಡ್ ಕಾರ್ಯಪಡೆಯ ಸಭೆ

ಉಡುಪಿ ಜಿಲ್ಲೆ ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಹೆಚ್ಚುತ್ತಿರುವ ಕರೋನ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾಪಂಚಾಯತ್ ಉಡುಪಿ ಇವರು ನಾಡ ಗ್ರಾ.ಪಂ ಗೆ ಭೇಟಿ ನೀಡಿ ಕೋವಿಡ್ ಕಾರ್ಯಪಡೆಯ ಸಭೆಯನ್ನು ನಡೆಸಿದರು.

ಇದುವರೆಗೂ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು ಒಟ್ಟು 12 ಸೋಂಕಿತರು ಮರಣ ಹೊಂದಿದ್ದು ಒಟ್ಟು 78 ಸಕ್ರಿಯ ಪ್ರಕರಣಗಳಿರುವ ಕುರಿತು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೋಂಕು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮವಹಿಸುವ ಕುರಿತು ಕೋವಿಡ್ ಕಾರ್ಯಪಡೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಭೆ ಮುಕ್ತಾಯದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಾಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು ನಂತರ ವ್ಯಾಕ್ಸಿನೇಷನ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೊನೆಯಲ್ಲಿ ಹೋಮ್ ಐಸೋಲೇಷನ್ ಅಲ್ಲಿರುವ ಸೋಂಕಿತರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ಧೈರ್ಯ ತುಂಬಿದರು.
ಕೊವಿಡ್ ನಿಯಂತ್ರಿಸುವ ಕಾರ್ಯಾಚರಣೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಟ್ ಉಡುಪಿ,ಕಾರ್ಯಳಹ ನಿರ್ವಹಣಾಧಿಕಾರಿ ಬೈಂದೂರು ಶ್ರೀಮತಿ ಭಾರತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ, ಪಂಚಾಯತ್ ಲೆಕ್ಕ ಪರಿಶೋಧಕಪಂಚಾಯತ್ ಅಟೆಂಡರ್ ಮಾಧವ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಾ ವೈದ್ಯಾಧಿಕಾರಿ ಡಾ|| ಚಿಕ್ಮಮರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕರೋನ ತಡೆಗಟ್ಟುವಲ್ಲಿ ಶ್ರಮವಹಿಸುವಂತಹ ಕಾರ್ಯಪಡೆ ಸದಸ್ಯರು, ನಾಡಾ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಉಪಾಧ್ಯಕ್ಷ ಪದ್ದು ಪೂಜಾರಿ ಹಾಗೂ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *