Header Ads
Breaking News

ನಾಸ್ಡಾಕ್ ದುಬೈನ ಖಾಸಗಿ ಮಾರುಕಟ್ಟೆ ಪ್ರವೇಶಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಜ್ಯುವೆಲ್ಲರಿ ರೀಟೇಲರ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಅಂತಾರಾಷ್ಟ್ರೀಯ ಹೂಡಿಕೆ ಅಂಗಸಂಸ್ಥೆಯಾಗಿರುವ ಮಲಬಾರ್ ಇನ್ವೆಸ್ಟ್‌ಮೆಂಟ್ಸ್ ದುಬೈ ಇಂಟರ್‌ನ್ಯಾ?ನಲ್ ಫೈನಾನ್ಷಿಯಲ್ ಸೆಂಟರ್(ಡಿಐಎಫ್‌ಸಿ) ಅನ್ನು ಪ್ರವೇಶಿಸಿದೆ. ಮತ್ತು ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯೂರಿಟೀಸ್ ಡೆಪೋಸಿಟರಿ(ಸಿಎಸ್‌ಡಿ)ಯಲ್ಲಿ ತನ್ನ ಷೇರುಗಳನ್ನು ನೋಂದಣಿ ಮಾಡಿದೆ. ಇದರ ಮೂಲಕ ಮಲಬಾರ್ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಶುಭ ಸಂದೇಶವನ್ನು ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು ನಾಸ್ಡಾಕ್ ದುಬೈನ ಮಾರುಕಟ್ಟೆ ಗಂಟೆಯನ್ನು ಬಾರಿಸುವ ಮೂಲಕ ಈ ಸಂಭ್ರಮದ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದುಬೈ ಇಂಟರ್‌ನ್ಯಾಷ್ಯಾನಲ್ ಫೈನಾನ್ಷಿಯಲ್ ಸೆಂಟರ್(ಡಿಐಎಫ್‌ಸಿ)ಯ ಗವರ್ನರ್ ಮತ್ತು ದುಬೈ ಫೈನಾನ್ಷಿಯಲ್ ಮಾರ್ಕೆಟ್(ಡಿಎಫ್‌ಎಂ)ನ ಅಧ್ಯಕ್ಷ ಡಾ.ಪಿಎ ಇಬ್ರಾಹಿಂ ಹಾಜಿ, ಮಲಬಾರ್ ಗ್ರೂಪ್‌ನ ಸಹ-ಅಧ್ಯಕ್ಷ ಹಮೀದ್ ಅಲಿ, ನಾಸ್ಡಾಕ್ ದುಬೈನ ಸಿಇಒ ಹಾಗೂ ಡಿಎಫ್‌ಎಂನ ಉಪ ಸಿಇಒ ಸೇರಿದಂತೆ ಎರಡೂ ಕಡೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಾಸ್ಡಾಕ್ ದುಬೈ ಪ್ರೈವೇಟ್ ಮಾರ್ಕೆಟ್‌ಗೆ ಗ್ರೂಪ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ ಇಎನ್‌ಬಿಡಿ ಸೆಕ್ಯುರಿಟೀಸ್‌ನಂತಹ ಬ್ರೋಕರೇಜ್ ಕಂಪನಿಗಳ ಮೂಲಕ ನಿರ್ದೇಶಕ ಮಂಡಳಿಯ ಅನುಮೋದನೆಯೊಂದಿಗೆ  ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಂದ ತನ್ನ 3೦೦+ ಷೇರುದಾರರಿಗೆ ಅನುವು ಮಾಡಿಕೊಡುತ್ತದೆ. ಅದೇ ರೀತಿ ಮಾಲೀಕತ್ವದ ವರ್ಗಾವಣೆಗಳು ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯುರಿಟೀಸ್ ಡಿಪಾಸಿಟರಿಯಲ್ಲಿ ಸುರಕ್ಷಿತವಾಗಿ ನಡೆಯುತ್ತವೆ. ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯುರಿಟೀಸ್ ಡೆಪೋಸಿಟರಿ (ಸಿಎಸ್‌ಡಿ)ಯಲ್ಲಿ ಮಾಲೀಕತ್ವದ ವರ್ಗಾವಣೆ ಅತ್ಯಂತ ಸುರಕ್ಷಿತವಾಗಿ ನಡೆಯಲಿದೆ.

ಡಿಐಎಫ್‌ಸಿಯ ಗವರ್ನರ್ ಮತ್ತು ಡಿಎಫ್‌ಎಂನ ಅಧ್ಯಕ್ಷ ಎಚ್.ಇ.ಎಸ್ಸಾ ಕಝೀಂ ಅವರು ಮಾತನಾಡಿ, “ಈ ಪ್ರದೇಶದ ಪ್ರಮುಖ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾಗಿ ದುಬೈ ರೂಪುಗೊಂಡಿದೆ. ಬಂಡವಾಳ ಮಾರುಕಟ್ಟೆಗಳ ಲಾಭಗಳನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ರೀತಿಯ ಕಂಪನಿಗಳಿಗೆ ಹಲವಾರು ಅವಕಾಶಗಳನ್ನು ಒದಗಿಸಲು ದುಬೈ

ಬದ್ಧವಾಗಿದೆ. ಅಲ್ಲದೇ, ಬಂಡವಾಳ ಮಾರುಕಟ್ಟೆಗಳ ಲಾಭಗಳನ್ನು ಪಡೆಯಲು ಮತ್ತು ಅವರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಸಶಕ್ತಗೊಳಿಸಲು ಹಲವಾರು ರೀತಿಯ ಕಂಪನಿಗಳನ್ನು ವಿವಿಧ ರೀತಿಯ ಕಂಪನಿಗಳಿಗೆ ಆಗು ಅವರ ಬೆಳವಣಿಗೆಯ ಕಾರ್ಯತಂತ್ರಗಳನ್ನು ಶಕ್ತಗೊಳಿಸಲು ಹಲವಾರು ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ. ಡಿಐಎಫ್‌ಸಿಯ ವಿಶ್ವ ಮಟ್ಟದ ವ್ಯಾಪಾರದ ವಾತಾವರಣ ಮತ್ತು ನಾಸ್ಡಾಕ್ ಮೂಲಸೌಕರ್ಯ ಮತ್ತು ನಿಬಂಧನೆಗಳನ್ನು ಹೊಸ ಕಂಪನಿಗಳನ್ನು ಸ್ಥಾಪಿಸುವುದು, ಅವರ ಪ್ರಸ್ತುತ ಚಟುವಟಿಕೆಗಳನ್ನು ಪುನರ್‌ರಚಿಸುವುದು ಅಥವಾ ಅವುಗಳ ಬಂಡವಾಳ ಮಾರುಕಟ್ಟೆಯನ್ನು ಕಾರ್ಯಗತಗೊಳಿಸುವುದು ಎಂಬುದರ ಕುರಿತು ವಿಶ್ವದಾದ್ಯಂತದ ಹಲವಾರು ಪ್ರಮುಖ ಉದ್ಯಮಗಳನ್ನು ನಿರಂತರವಾಗಿ ಆಕರ್ಷಿಸುವಲ್ಲಿ ಇದು ಪ್ರಮುಖ ಅಂಶವಾಗಿದೆ” ಎಂದರು.

ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಎಂಇಎಎಸ್‌ಎ)ದಲ್ಲಿ ಡಿಐಎಫ್‌ಸಿ ಒಂದು ಪ್ರಮುಖ ಹಣಕಾಸು ಹಬ್ ಆಗಿದೆ. ಈ ಪ್ರದೇಶದ 72 ದೇಶಗಳು ಸುಮಾರು ೩ ಬಿಲಿಯನ್ ಜನಸಂಖ್ಯೆಯನ್ನು ಹೊಂದಿವೆ ಮತ್ತು 7.7 ಟ್ರಿಲಿಯನ್ ಯುಎಸ್ ಡಾಲರ್‌ನ? ಜಿಡಿಪಿಯನ್ನು ಹೊಂದಿವೆ. ಮಲಬಾರ್‌ನ ಈ ಪ್ರಮುಖ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ ಅಹ್ಮದ್ ಅವರು, “ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಪ್ರಗತಿ ಸಾಧಿಸುವುದನ್ನು ಮುಂದುವರಿಸಿದ್ದು, ಕಂಪನಿಯು ದುಬೈ ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ಸೆಂಟರ್(ಡಿಐಎಫ್‌ಸಿ)ಯಂತಹ ಸಂಸ್ಥೆಯಲ್ಲಿ ನೆಲೆಗೊಂಡಿರುವುದು ಸಂತಸ ತಂದಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ಪಾರದರ್ಶಕತೆ, ನಿಯಮಗಳು ಮತ್ತು ಅನುಸರಣೆ ಆಧಾರದಲ್ಲಿ ನೆಲೆಗೊಂಡಿದೆ. ಹೆಚ್ಚು ಔಪಚಾರಿಕ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ  ಷೇರು ವರ್ಗಾವಣೆಯೊಂದಿಗೆ ಷೇರುಗಳ ರಿಜಿಸ್ಟ್ರಾರ್ ಆಗಿ (ನಾಸ್ಡಾಕ್ ದುಬೈ ಆಗಿರುವುದರಿಂದ) ಸ್ವತಂತ್ರ ನಿಯಂತ್ರಿತ ಅಧಿಕಾರವನ್ನು ಹೊಂದಿರುವ ಅಗತ್ಯವನ್ನು ಮಂಡಳಿ ಗುರುತಿಸಿದೆ” ಎಂದರು.

ನಾಸ್ಡಾಕ್ ದುಬೈನ ಸಿಇಒ ಮತ್ತು ಡಿಎಫ್‌ಎಂನ ಉಪ ಸಿಇಒ ಹಮೀದ್ ಅಲಿ ಅವರು ಮಾತನಾಡಿ, “ನಾಸ್ಡಾಕ್ ದುಬೈ ಪ್ರೈವೇಟ್ ಮಾರ್ಕೆಟ್‌ಗೆ ಸೇರ್ಪಡೆಗೊಂಡಿರುವುದಕ್ಕೆ ನಾವು ಮಲಬಾರ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಇದು ಸಾರ್ವಜನಿಕ ಮಾರುಕಟ್ಟೆಗಳ ಮೂಲಕ ಅಥವಾ ಖಾಸಗಿಯಾಗಿರಲಿ, ಹೆಚ್ಚಿನ ಹೂಡಿಕೆದಾರರ ಪಾಲ್ಗೊಳ್ಳುವಿಕೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವ ಸಾಮರ್ಥ್ಯವನ್ನು ವ್ಯವಹಾರಗಳಿಗೆ ಒದಗಿಸುತ್ತದೆ. ಹೊಸ ಹೂಡಿಕೆದಾರರು ಮಂಡಳಿಯಲ್ಲಿ ಬರುವಾಗ ಷೇರು ದಾರರ ಸಂಖ್ಯೆ ಹೆಚ್ಚಾಗಲು ಪ್ರಾರಂಭವಾದಾಗ ಷೇರು ನೋಂದಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಈ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದೇವೆ” ಎಂದು ತಿಳಿಸಿದರು.

ಮಲಬಾರ್ ಗ್ರೂಪ್‌ನ ಕಾರ್ಯಾಚರಣಾ ವ್ಯವಹಾರವಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಪ್ರಸ್ತುತ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ದೂರದ ಪೂರ್ವ ಮತ್ತು ಯುಎಸ್ ಅಂತಹ 10 ದೇಶಗಳಲ್ಲಿ 260 ಕ್ಕೂ ಹೆಚ್ಚು ಮಳಿಗೆಗಳು ಮತ್ತು 14 ಸಗಟು ಘಟಕಗಳನ್ನು ಹೊಂದಿದೆ. ಅಲ್ಲದೇ, 14 ಆಭರಣ ಉತ್ಪಾದನಾ ಕೇಂದ್ರಗಳನ್ನು ಹೊಂದುವ ಮೂಲಕ ವಿಸ್ತಾರವಾದ ವ್ಯಾಪಕ ಜಾಲದ ಮೂಲಕ 4.51ಬಿಲಿಯನ್ ಡಾಲರ್‌ಗಳ ವಹಿವಾಟನ್ನು ನಡೆಸುತ್ತಿದೆ. ಕಂಪನಿಯು 2021-22 ನೇ ಸಾಲಿನಲ್ಲಿ ಭಾರತದಲ್ಲಿ 40 ಸೇರಿದಂತೆ ಜಗತ್ತಿನದಾದ್ಯಂತ ಇನ್ನೂ 56 ಸ್ಟೋರ್‌ಗಳನ್ನು ಆರಂಭಿಸುವ ಯೋಜನೆ ಮೂಲಕ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ವಿಸ್ತರಣೆ ಯೋಜನೆಗೆ ಕಂಪನಿಯು 220 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಭವಿಷ್ಯದ  ಮಾರುಕಟ್ಟೆಯಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲಿದೆ ಎಂಬ ವಿಶ್ವಾಸವನ್ನು ಹೊಂದಿದೆ.

Related posts

Leave a Reply

Your email address will not be published. Required fields are marked *