Header Ads
Breaking News

ನಿಗದಿತ ಸಮಯದ ಮಿತಿಯೊಳಗೆ ಎರಡನೆ ಡೋಸ್ ಲಸಿಕೆ ನೀಡಬೇಕು : ಶಾಸಕ ಜೆ.ಆರ್.ಲೋಬೋ ಆರೋಪ

ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ ವೆನ್‍ಲಾಕ್‍ನಲ್ಲಿ ಕೋವಿಡ್ ತಡೆಗಾಗಿ ನೀಡಲಾಗುತ್ತಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪೂರೈಕೆಯಲ್ಲಿ ಕೊರತೆ ಇದೆ. ಈ ಸಂದರ್ಭದಲ್ಲಿ ಮೊದಲ ಡೋಸ್ ಲಸಿಕೆ ನೀಡಿದವರಿಗೆ ಆದ್ಯತೆಯ ಮೇರೆಗೆ ಎರಡನೆ ಡೋಸನ್ನು ನಿಗದಿತ ದಿನಗಳ ಒಳಗೆ ನೀಡಬೇಕಾಗಿದೆ ಆದರೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಈ ನಿಯಮ ಮುರಿದು ತಮಗೆ ಬೇಕಾದವರಿಗೆ ಮೊದಲು ನೀಡುವ ರಾಜಕೀಯ ಹಸ್ತಕ್ಷೇಪ ಮಾಡಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ರು. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ ಲಾಕ್ ಆಸ್ಪತ್ರೆಯ ಮೂಲಕ ಪ್ರಥಮ ಡೋಸ್ ಲಸಿಕೆ ನೀಡಿದವರಿಗೆ ನಿಗದಿತ ಸಮಯದ ಮಿತಿಯೊಳಗೆ ಎರಡನೆ ಡೋಸ್ ಲಸಿಕೆ ನೀಡಬೇಕು ಇಲ್ಲದೆ ಇದ್ದಲ್ಲಿ ಮೊದಲನೆ ಡೋಸ್ ಪಡೆದಿರುವುದು ವ್ಯರ್ಥವಾಗುತ್ತದೆ. ಇಂತಹ ಸಂದರ್ಭ ನಿನ್ಬೆ ಜಿಲ್ಲೆಗೆ ಬಂದಿರುವು ದು ಕೇವಲ 350 ಡೋಸ್ ಮಾತ್ರ.ಇದನ್ನು ಮೊದಲು ಲಸಿಕೆ ಪಡೆದವರಿಗೆ ಆದ್ಯತೆ ಯ ಮೇಲೆ ನೀಡಬೇಕಿತ್ತು.ಆದರೆ ಶಾಸಕರು ಈ ನಿಯಮ ಉಲ್ಲಂಘಿಸಿ ತಮ್ಮ ಹಿಂಬಾಲಕರಿಗೆ ನೀಡುವ ಮೂಲಕ ಲಸಿಕೆ ನೀಡುವ ಕಾರ್ಯ ಕ್ರಮ ದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜೆ.ಆರ್.ಲೋಬೋ ಆರೋಪಿಸಿದ್ದಾರೆ.ಶಾಸಕರು ಈ ರೀತಿ ಹಸ್ತಕ್ಷೇಪ ಮಾಡುವ ಬದಲು ಎಲ್ಲರಿಗೂ ಲಸಿಕೆಯನ್ನು ತರಿಸಿ ನೀಡುವ ತಾಕತ್ತನ್ನು ಪ್ರದರ್ಶಿಸಲಿ.ಈ ರೀತಿಯ ಹಸ್ತಕ್ಷೇಪ ನಡೆದರೆ ಇದನ್ನು ತಟೆಯಲು ಕಾಂಗ್ರೆಸ್ ಮಧ್ಯೆ ಪ್ರವೇಶಿಸ ಬೇಕಾದೀತು ಎಂದು ಜೆ.ಆರ್. ಲೋಬೋ ಎಚ್ಚರಿಕೆ ನೀಡಿದ್ದಾರೆ..ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಟಾಸ್ಕ್ ಫೋರ್ಸ್ ಸಮಿತಿ ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಕೊಡುಗೆಯಾಗಿ ನೀಡಿದ ಆ್ಯಂಬುಲೆನ್ಸ್ ವಾಹನಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿಂದು ಚಾಲನೆ ನೀಡಲಾಯಿತು.ಪಾಲಿಕೆ ವಿಪಕ್ಷ ನಾಯಕ ವಿನಯರಾಜ್,ಹಾಗೂ ಇತರ ಕಾಂಗ್ರೆಸ್ ಪದಾಧಿಕಾರಿಗಳಾದ ಸುಭೋದ್ ಆಳ್ವ, ಮುಹಮ್ಮದ್ ಕುಂಜತ್ತಬೈಲ್,ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ದಾಸ್ ಕುಮಾರ್ , ಸತೇಶ್ ಶೆಟ್ಟಿ, ಟಿ.ಕೆ.ಸುಧೀರ್, ಅಶ್ರಫ್, ಸಂಶುದ್ಧೀನ್, ರಮಾನಂದ,ಯೋಗೀಶ್,ನೀರಜ್ ಪಾಲ್ ಮೊದಲಾವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *