Header Ads
Breaking News

ನೂರು ವರ್ಷದ ಇತಿಹಾಸವಿರುವ ಬೆಳ್ಳಾರೆಯ “ತೋಟ “ಮನೆಯಲ್ಲಿ ಧರ್ಮ ದೈವ ಕಿರುಚಿತ್ರದ ಚಿತ್ರೀಕರಣ

ತುಳುನಾಡಿನ ಕಾರ್ಣಿಕದ ಶಕ್ತಿ ದೈವದ ಕಾರ್ಣಿಕವನ್ನು ತೋರಿಸುವ ಕಥಾ ವಸ್ತುವಿರುವ ಧರ್ಮ ದೈವ ಕಿರು ಚಿತ್ರದ ಚಿತ್ರೀಕರಣ ಸುಮಾರು ನೂರು ವರ್ಷದ ಇತಿಹಾಸವಿರುವ ಬೆಳ್ಳಾರೆಯ “ತೋಟ “ಮನೆಯಲ್ಲಿ ನಡೆದಿದೆ. ನಿತಿನ್ ರೈ ಕುಕ್ಕುವಳ್ಳಿ ಹಾಗು ಹಮೀದ್ ಪುತ್ತೂರು ಚಿತ್ರವನ್ನು ನಿರ್ದೇಶಸಿದ್ದು ಕಥೆ ನಿತಿನ್ ರೈ ಕುಕ್ಕುವಳ್ಳಿ ಬರೆದಿದ್ದಾರೆ.
ತುಳುನಾಡಿನ ಕಾರ್ಣಿಕ ಶಕ್ತಿಯೇ ನಾವೆಲ್ಲ ನಂಬುವ ದೈವಗಳು… ತುಳುನಾಡಿನಲ್ಲಿ ಪ್ರತಿ ಕುಟುಂಬಕ್ಕೆ ಒಂದೊಂದು ಧರ್ಮ ದೈವವಿರುತ್ತದೆ ಈ ಧರ್ಮ ದೈವದ ಕಾರ್ಣಿಕವನ್ನು ತೋರಿಸುವ ಒಂದು ಚಿಕ್ಕ ಪ್ರಯತ್ನವೇ ಸೋನು ಕ್ರಿಯೆಶನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಿರು ಚಿತ್ರವೆ ಧರ್ಮ ದೈವ. ಚಿತ್ರದ ಚಿತ್ರೀಕರಣ ಬೆಳ್ಳಾರೆಯ ಸುಮಾರು ನೂರು ವರ್ಷದ ಇತಿಹಾಸವಿರುವ ಬೆಳ್ಳಾರೆಯ “ತೋಟ “ಮನೆಯಲ್ಲಿ ಹಾಗು ಸುತ್ತ ಮುತ್ತ ಪರಿಸರದಲ್ಲಿ ನಡೆದು ಇದೀಗ ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿದೆ. ಬೆಳ್ಳಾರೆಯಲ್ಲಿ ನಡೆದ ಚಿತ್ರೀಕರಣಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಸುಬಾಶ್ಚoದ್ರ ರೈ ತೋಟ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನೆಯ ಹಿರಿಯರಾದ ಲಕ್ಷ್ಮಿ ನಾರಾಯಣ ಭಂಡಾರಿ, ಬಾಲ ಚಂದ್ರ ರೈ ಶರತ್ ರೈ ಪಟ್ಟೆ ಮುಂತಾದವರು ಉಪಸ್ಥಿತರಿದ್ದರು. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುಂದರ್ ರೈ ಮಂದಾರ, ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ ರೈ, ಚಿತ್ತರಂಜನ್ ಶೆಟ್ಟಿ ನುಳಿಯಾಲು, ವಸಂತ ಲಕ್ಷ್ಮಿ, ಕೌಶಿಕ್ ರೈ ತೋಟ ಮತ್ತು ನಿತೇಶ್ ದೊಳ್ತೊಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೆಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.. ಹರೀಶ್ ಪುತ್ತೂರು ಕ್ಯಾಮರಾ ಕೆಲಸ ಮಾಡಿದ್ದು ರಾಧೆಶ್ ರೈ ಮೋಡ ಪ್ಪಾಡಿ ಅವರ ಸಂಕಲನ ಮತ್ತು ಧ್ವನಿಗ್ರಹನ ವಿದ್ದು ಪ್ರೇಮ್ ಅರ್ಲಪದವು ಅವರ ಪ್ರಸಾದನ ಈ ಕಿರು ಚಿತ್ರಕ್ಕಿದೆ. ಚಿತ್ರದ ಚಿತ್ರಕತೆ ಹಮೀದ್ ಪುತ್ತೂರು ಬರೆದಿದ್ದು ಸಂಭಾಷಣೆ ಜವಾಬ್ದಾರಿಯನ್ನು ಹಮೀದ್ ಪುತ್ತೂರು ಮತ್ತು ನಾರಾಯಣ ರೈ ಕುಕ್ಕುವಳ್ಳಿ ಮತ್ತು ಸ್ಥಿರ ಚಿತ್ರ ಪ್ರಣವ ಭಟ್ ಗ್ರಾಫಿಕ್ಸ್ ಧನು ರೈ ಹಾಗು ನಿತಿನ್ ಕಾಣಾವು ನಿರ್ವಹಿಸಿದ್ದಾರೆ.

Related posts

Leave a Reply

Your email address will not be published. Required fields are marked *