Header Ads
Breaking News

ಪಂಪ್‍ವೆಲ್‍ಗ್ ಬಲೆ….ಪಂಪ್‍ವೆಲ್‍ಗ್ ಬಲೆ : ರಂಗೇರಿದೆ ಫ್ಲೈಓವರ್ ರಸ್ತೆಯ ಗೋಡೆಗಳು..!

ವರ್ಷಗಳ ಹಿಂದೆ ” ಪಂಪ್‍ವೆಲ್‍ಗೆ ಬಲೆ” .. ” ಪಂಪ್‍ವೆಲ್‍ಗ್ ಬಲೆ “… ಹಾಡು ಸಕತ್ ವೈರಲ್ ಆಗಿತ್ತು. ಪಂಪ್‍ವೆಲ್ ಫ್ಲೈ ಓವರ್ ಕಾಮಗಾರಿ ಇನ್ನಿಲ್ಲದಷ್ಟು ವಿಳಂಬವಾದಗ ಜನರೇ ಕಟ್ಟಿದ ಈ ಹಾಡು ಬಾರೀ ಟ್ರೋಲ್ ಆಗಿತ್ತು. ದೀಗ ಇದೇ ಪಂಪ್‍ವೆಲ್‍ಗ್ ಬಲೆ… ಪಂಪ್‍ವೆಲ್‍ಗ್ ಬಲೆ ಹಾಡಿನ ಮೂಲಕ ಕೈ ಬೀಸಿ ಕರೆದರೆ ಬಂತಂತಹ ಜನರಿಗೆ ಮೋಸವಾಗದು…ಅಷ್ಟೊಂದು ಸುಂದರವಾಗಿ ಚಿತ್ರಾಲಂಕಾರಗೊಡಿದೆ ಈ ಪಂಪ್‍ವೆಲ್‍ಫ್ಲೈ ಓವರ್..

ಪಂಪ್‍ವೆಲ್ ಫ್ಲೈ ಓವರ್‍ನ ಇಕ್ಕೆಲಗಳ ಗೋಡೆಗಳಲ್ಲಿ ಆಕರ್ಷಕ ವರ್ಲಿ ಚಿತ್ತಾರಗಳು ಮೂಡಿವೆ. ಫ್ಲೈ ಓವರ್‍ನ ಎರಡೂ ಬದಿಯ ಸರ್ವೀಸ್ ರಸ್ತೆಗಳ ಮೂಲಕ ಹಾದು ಹೋಗುವವರಿಗೆ ಈಗ ಕಣ್ಣಿಗೆ ಹಬ್ಬ. ಕಲಾವಿದರ ಸುಮಾರು ಒಂದು ತಿಂಗಳ ಶ್ರಮ ಈಗ ರಸ್ತೆಯ ಗೋಡೆಗೆ ಹೊಸ ರಂಗ್ ಕೊಟ್ಟಿದೆ. ಮಂಗಳೂರಿನ ಆದಿತತ್ವ ಕಲಾವಿದರ ಬಳಗದ ಕುಂಚದಲ್ಲಿ ಮೂಡಿದ ಈ ವರ್ಲಿ ಚಿತ್ತಾರಗಳು ಪ್ರಯಾಣಿಕರ ಕಣ್ಮಣ ಸೆಳೆಯುತ್ತದೆ.

ಪಂಪ್ ವೆಲ್ ನಿಂದ ನಂತೂರು ಕಡೆಗೆ ಹಾಗೂ ಇನ್ನೊಂದು ಭಾಗದಲ್ಲಿ ಪಂಪ್ ವೆಲ್‍ನಿಂದ ಉಜ್ಜೋಡಿ ತನಕ ಫ್ಲೈ ಓವರ್ ರಸ್ತೆಯ ಎರಡೂ ಇಕ್ಕೆಲಗಳಲ್ಲೂ ಫ್ಲೈ ಓವರ್ ಗೋಡೆಗೆ ಪೂರ್ಣವಾಗಿ ಬೇಸ್ ಪೈಂಟ್ ಮೂಲಕ ಚೆಂದ ಮಾಡಿ ಬಳಿಕ ಆಕರ್ಷಕವಾಗಿ ಚಿತ್ತಾರಗಳನ್ನು ಮಾಡಲಾಗಿದೆ. ವರ್ಲಿ ಕಲಾ ಪ್ರಕಾರದ ಮೂಲಕ ಕರಾವಳಿಯ ಜಾನಪದ, ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ತಾರಗಳನ್ನು ಮಾಡಲಾಗಿದೆ. ಕರ್ನಾಟಕ ಬ್ಯಾಂಕ್ ಸಹಕಾರದಿಂದಾಗಿ ಈ ರಸ್ತೆ ಗೋಡೆಗೆ ಚಿತ್ತಾರಗಳ ವರ್ಣ ಲಭಿಸಿದೆ .

                                                                                                                          ವಿಕ್ರಮ್( ಕಲಾವಿದ )

ಸುಮಾರು 25 ಕಲಾವಿದರ ಕುಂಚದ ಶ್ರಮ ಈ ವರ್ಣಾಲಂಕರಾದ ಹಿಂದೆ ಇದೆ.ಆದಿತತ್ವ ಕಲಾವಿದರ ಬಳಗದ ಹೆಚ್ಚಿನ ಕಲಾವಿದರು ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಕಲಾ ಪದವೀಧರರು. ತಂಡದ ಬಹುತೇಕ ಎಲ್ಲರೂ ಯುವ ಕಲಾವಿದರು. ತಂಡದ ಎಲ್ಲರೂ ಉತ್ತಮ ಕಲಾ ನೈಪುಣ್ಯಗಾರರಾಗಿರುವುದರಿಂದ ಕೆಲವೇ ಕ್ಷಣಗಳಲ್ಲಿ ಬೆರಗು ಮೂಡಿಸುವಂತಹ ಚಿತ್ತಾರಗಳನ್ನು ಮೂಡಿಸುತ್ತಾರೆ. ಪಂಪ್‍ವೆಲ್ ಸದಾ ಗಿಜಿಗಿಡುವ ರಸ್ತೆಯಾಗಿರುವುದರಿಂದ ಸದ್ಯದ ಲಾಕ್ ಡೌನ್ ಕಲಾವಿದರಿಗೆ ಕೊಂಚನೆಮ್ಮದಿಯಿಂದ ಚಿತ್ರ ಬರೆಯಲು ಅನುಕೂಲ ಮಾಡಿಕೊಟ್ಟಿದೆ.

ಲಾಕ್ ಡೌನ್ ಮುಗಿದ ಬಳಿಕ ಪಂಪ್‍ವೆಲ್ ಗ್ ಬಲೆ …ಪಂಪ್‍ವೆಲ್ ಗ್ ಬಲೆ…ಟ್ರೋಲ್ ಹಾಡು ಮತ್ತೆ ನೆನಪಾದರೆ ಖಂಡಿತ ನಿಮಗೆ ಮೋಸವಾಗದು. ಅಷ್ಟೋಂದು ವರ್ಣಮಯ ವರ್ಲಿ ಚಿತ್ತಾರಗಳು ನಿಮ್ಮನ್ನು ಕೈ ಸೆಳೆದು ಬರ ಮಾಡಿಕೊಳ್ಳಲಿದೆ.

Related posts

Leave a Reply

Your email address will not be published. Required fields are marked *