Header Ads
Breaking News

ಪಂಪ್‍ವೇಲ್ ಫ್ಲೈಓವರ್ ಜಂಕ್ಷನ್ ಜಲಾವೃತ….!

ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ಇಂದು ಮುಂಜಾನೆ ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕೆಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನು ಮುಂಜಾನೆ ಸುರಿದ ಮಳೆಯ ಅಬ್ಬರಕ್ಕೆ ನಗರದ ಪಂಪ್‍ವೆಲ್ ವೃತ್ತದಲ್ಲಿ ನೀರು ಸೇರಿ ಹರಿದು ಹೋಗದೆ ಸಂಚಾರಕ್ಕೆ ಅಡ್ಡಿಯಾಯಿತು. ಪಂಪ್‍ವೆಲ್ ವೃತ್ತದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೇರಿಕೊಂಡಿದ್ದು, ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಪಂಪ್‍ವೆಲ್ ಮೇಲ್‍ಸೇತುವೆಯ ಕೆಳಗೆ ಜಂಕ್ಷನ್‍ನಲ್ಲಿ ಕೂಡಾ ಅಪಾರ ಪ್ರಮಾಣದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅಲ್ಲದೇ ಪಡೀಲ್ ಅಂಡರ್‍ಪಾಸ್ , ಕೊಟ್ಟಾರ ಚೌಕಿಯಲ್ಲೂ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಂಟಾಗಿತ್ತು.

Related posts

Leave a Reply

Your email address will not be published. Required fields are marked *